ಜಿಲ್ಲೆ

ಕೋವಿಡ್ ಮರಣ ಪರಿಶೋಧನಾ ತಂಡ ರಚನೆ

ಪಂಕಜ ಕೆ.ಎಂ.

ಬೆಂಗಳೂರು: ಕೋವಿಡ್ -19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ರಾಜ್ಯ ಕೋವಿಡ್ ಮರಣ ಪರಿಶೋಧನಾ ತಂಡವನ್ನು (State Covid Death Audit Team ) ಮರುರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ತಂಡವು ರಾಜ್ಯಮಟ್ಟದಲ್ಲಿ ಕೋವಿಡ್ -19 ಮರಣಗಳಿಗೆ ಕಾರಣಗಳು, ರೋಗಲಕ್ಷಣಗಳು, ಸಹರೋಗಗಳು, ಲಸಿಕೆ ನೀಡಿಕೆ, ಆಸ್ಪತ್ರೆಗೆ ದಾಖಲಾದ ದಿನಗಳ ವಿಶ್ಲೇಷಣೆ, ದಾಖಲಾತಿ ಮತ್ತು ವರದಿಯಲ್ಲಿ ವಿಳಂಬ ಮುಂತಾದ ಅಂಶಗಳನ್ನು ಪರಿಶೀಲಿಸಿ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಲು ಹಾಗೂ ಚಿಕಿತ್ಸಾ ಶಿಷ್ಟಾಚಾರ ಪಾಲಿಸಲು, ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಿದೆ.

ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ. ಬಿ.ಎಲ್. ಶಶಿಭೂಷಣ್ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ತಂಡದಲ್ಲಿ ಒಬ್ಬರು ಸದಸ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ವಿವಿಧ ಆಸ್ಪತ್ರೆಗಳು ಸೇರಿ 14 ಸದಸ್ಯರು ಇರಲಿದ್ದಾರೆ.