ಎಂ.ಜಿ.ಪರಮೇಶ್ ಮಡಬಲುಗೆ ರಾಜ್ಯ ಪ್ರಶಸ್ತಿ 
ಜಿಲ್ಲೆ

ಎಂ.ಜಿ.ಪರಮೇಶ್ ಮಡಬಲುಗೆ ರಾಜ್ಯ ಪ್ರಶಸ್ತಿ

ಲೋಕೇಶ್ ಮನು. ಡಿ

ಆಲೂರು: ಎಂ.ವಿ.ತ್ಯಾಗರಾಜ್ ಅಭಿನಂದನಾ ಸಮಿತಿ ಹಾಗೂ ಬೆಂಗಳೂರಿನ ಸುಮಂಗಲಿ ಸೇವಾಶ್ರಮ ವತಿಯಿಂದ 2025ನೇ ಸಾಲಿಗೆ ಕೊಡಮಾಡುವ ಮಾಪಮ್ಮ ಎಸ್.ಹೊಸಮನಿ ಅವ್ವ ದತ್ತಿ ರಾಜ್ಯ ಪ್ರಶಸ್ತಿಗೆ ಎಂ.ಜಿ.ಪರಮೇಶ್ ಮಡಬಲು ಆಯ್ಕೆಯಾಗಿದ್ದಾರೆ.

ರಾಜ್ಯಮಟ್ಟದ ‘ಅವ್ವ’ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವ ಪರಮೇಶ್ ಅವರು ಪ್ರಸ್ತುತ ಹೊಳೆನರಸೀಪುರ ತಾಲೂಕು ಶಾಲಾ ಶಿಕ್ಷಣ ಇಲಾಖೆಯಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಲೇಖನಗಳು, ವೈಜ್ಞಾನಿಕ ಲೇಖನಗಳು, ವಿಮರ್ಶಾ ಲೇಖನಗಳು ಹಾಗೂ ಕವನ ಕವಿತೆಗಳನ್ನು ಬರೆದಿದ್ದಾರೆ. ಇವರು ಈಗಾಗಲೇ ಹತ್ತು ಮೌಲ್ಯಯುತ ಕೃತಿಗಳನ್ನು ಹೊರ ತಂದಿದ್ದಾರೆ. ಈ ಮೇಲಿನ ಸಾಹಿತ್ಯಾತ್ಮಕ ಕಾರ್ಯವನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಮೇ 10 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ತ್ಯಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.