ಜಿಲ್ಲೆ

ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭ

ಮುಂಡರಗಿ: ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ. ಇದರಿಂದ ರೈತರ ಫಸಲಿಗೆ ಒಳ್ಳೆಯ ದರ ಸಿಗಲಿದೆ. ರೈತರು ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಎರ‌್ರಿಸ್ವಾಮಿ ಪಿ.ಎಸ್. ಹೇಳಿದರು.

ಪಟ್ಟಣದ ಎಪಿಎಂಸಿಯಲ್ಲಿ ಕಲಕೇರಿ ಎಣ್ಣೆ ಬೀಜ ಬೆಳೆಗಾರರ ಸಂಸ್ಕರಣಾ ಸಹಕಾರ ಸಂಘದ ಮೂಲಕ ಬೆಂಬಲ ಬೆಲೆಯಡಿ ಸೂರ್ಯಕಾಂತಿ ಖರೀದಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ರೈತರು ಮುಂಚಿತವಾಗಿ ಹೆಸರು ನೋಂದಣಿ ಮಾಡಿಸಿಕೊಂಡು ಪ್ರಯೋಜನ ಪಡೆಯಬೇಕು ಎಂದರು.

ಎಪಿಎಂಸಿ ಕಾರ್ಯದರ್ಶಿ ಜೆ. ರಾಘವೇಂದ್ರ ಮಾತನಾಡಿ, ಈಗಾಗಲೇ ಸೂರ್ಯಕಾಂತಿ ಜತೆಗೆ ಹೆಸರು ಖರೀದಿ ಕೇಂದ್ರ ಪ್ರಾರಂಭಿಸಲಾಗಿದ್ದು, ಪ್ರತಿ ಕ್ವಿಂಟಾಲ್ ಸೂರ್ಯಕಾಂತಿಗೆ 7,280 ರೂ., ಹಾಗೂ ಹೆಸರು ಕಾಳಿಗೆ 8,682ರೂ. ದರ ನಿಗದಿ ಮಾಡಲಾಗಿದೆ. ಈಗಾಗಲೇ ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಿಸಿದ ರೈತರು ಖರೀದಿ ಕೇಂದ್ರದಲ್ಲಿ ಕಾಳು ಮಾರಾಟ ಮಾಡಬೇಕು ಎಂದರು.

ಮುದುಕನಗೌಡ ಪಾಟೀಲ, ಯಂಕಪ್ಪ ಹುಳಕಣ್ಣವರ, ಶಿವನಗೌಡ ಪಾಟೀಲ, ಶಿವಾನಂದ ಇಟಗಿ, ಮಲ್ಲನಗೌಡ ಪಾಟೀಲ, ಸಿದ್ದಣ್ಣ ತಳಕಲ್ಲ, ರಾಜಾಭಕ್ಷಿ ಹರ್ಲಾಪುರ, ಬಸವರಾಜ ಯಲಿಗಾರ, ಎನ್.ಎ. ಖತೀಬ್, ಹಿರೇಗೌಡರ, ರವಿ ಭಂಡಾರಿ, ಮಲ್ಲಿಕಾರ್ಜುನ ಭಂಡಾರಿ, ದೇವಪ್ಪ ಮಡಿವಾಳರ ಇತರರು ಇದ್ದರು.