ಚಿಕ್ಕಮಗಳೂರು ತಾಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಶಾಸಕ ಎಚ್.ಡಿ.ತಮ್ಮಯ್ಯ ಸಮವಸ್ತç ವಿತರಣೆ ಮಾಡಿದರು. ಮಹಾಂತೇಶ್, ತಾರಾನಾಥ್, ಸಂತೋಷ್, ರಂಗನಾಥ್, ಪೃಥ್ವಿ ಮತ್ತಿತರರಿದ್ದರು. 
ಜಿಲ್ಲೆ

ಗ್ಯಾರಂಟಿ ಯೋಜನೆಗೆ ಪ್ರತ್ಯೇಕ ಕಚೇರಿ ಆರಂಭ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಸರ್ಕಾರದ ಜನಪರ ಯೋಜನೆಗಳು ಬಡಜನರಿಗೆ ತಲುಪಬೇಕೆಂಬ ದೃಷ್ಟಿಯಿಂದ ತಾಲೂಕು ಪಂಚಾಯಿತಿ ಆವರಣದಲ್ಲಿ ಪ್ರತ್ಯೇಕ ಕಚೇರಿ ತೆರೆದು ಗ್ಯಾರಂಟಿ ಯೋಜನೆಗಳ ನೋಂದಣಿಗೆ ಕ್ರಮ ವಹಿಸಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಮವಸ್ತç ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹಲವಾರು ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಈಡೇರಿಸಲು ಸರ್ಕಾರದ ಮಟ್ಟದಲ್ಲಿ ಒತ್ತಡ ತಂದು ಈಡೇರಿಸುವುದಾಗಿ ಭರವಸೆ ನೀಡಿದರು.
ಸರ್ಕಾರ ಅಂಗನವಾಡಿ ಉದ್ಯೋಗಿಗಳ ಪರವಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ನಿಮ್ಮ ಕೆಲವು ವರ್ಷಗಳ ಬೇಡಿಕೆಗಳಲ್ಲಿ ಒಂದಾದ ನಿವೃತ್ತಿಯಾದ ಕಾರ್ಯಕರ್ತೆಯರಿಗೆ ಗ್ರಾÈಚುಟಿಯನ್ನು( ಉಪಧನ) ೨೦೨೨-೨೩ ನೇ ಸಾಲಿನಿಂದ ನಿವೃತ್ತಿಯಾಗುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ನೀಡಲು ಮುಂದಾಗಿದೆ ಎಂದರು.
ಅAಗನವಾಡಿ ಉದ್ಯೋಗಿಗಳ ಸೇವಾ ಭದ್ರತೆ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಜೊತೆಗೆ ಅಕ್ಷರ ದಾಸೋಹ ಕಾರ್ಯಕರ್ತೆಯರಿಗೂ ನಿವೃತ್ತಿ ವೇತನ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಸುಮಾರು ೨೨ ಲಕ್ಷ ರೂ ವೆಚ್ಚದಲ್ಲಿ ೨೨ ದಿವ್ಯಾಂಗ ಚೇತನರಿಗೆ ದ್ವಿಚಕ್ರ ವಾಹನ ಹಾಗೂ ೭೬ ಸಾವಿರ ರೂ. ವೆಚ್ಚದಲ್ಲಿ ಬ್ಯಾಟರಿ ಚಾಲಿತ ವೀಲ್ ಚೇರನ್ನು ಇದೇ ಸಂದರ್ಭದಲ್ಲಿ ವಿತರಣೆ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರಿಗೆ ಸಮವಸ್ತçವನ್ನೂ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ೨ ತಿಂಗಳಿAದ ತಾಂತ್ರಿಕ ತೊಂದರೆಯಿAದಾಗಿ ಗೃಹಲಕ್ಷ್ಮಿ ಹಣ ಬಂದಿರುವುದಿಲ್ಲ, ಈ ಬಗ್ಗೆ ಪರಿಶೀಲಿಸಲಾಗುತ್ತಿದೆ. ಈಗಾಗಲೇ ಕೆಲವರಿಗೆ ಜಿಬಿಟಿ ಮೂಲಕ ಫಲಾನುಭವಿ ಖಾತೆಗೆ ಹಣ ರವಾನಿಸಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಹಾಂತೇಶ್, ತಾಪಂ ಇಒ ತಾರಾನಾಥ್, ಕೆಡಿಪಿ ಸದಸ್ಯ ಸಂತೋಷ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಂಗನಾಥ್, ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಪೃಥ್ವಿ, ಗ್ರಾಪಂ ಸದಸ್ಯ ಎಚ್.ಪಿ.ಮಂಜೇಗೌಡ, ಹಿರೇಗೌಜ ಶಿವು, ಬಿಳೆಕಲ್ಲಳ್ಳಿ ಪುಟ್ಟೇಗೌಡ ಮತ್ತಿತರರಿದ್ದರು.