ಕೆ.ಆರ್.ಸಾಗರ: ಇಲ್ಲಿನ ಮಸ್ಸೀದ್ ಎ-ಮಹಿಯೊದ್ದಿನ್ ಸುನ್ನಿ ಮಸೀದಿಯಲ್ಲಿ 35 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಮತ್ತು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಅನ್ವರ್ ಭಾಷಾ ಜಂಟಿಯಾಗಿ ಚಾಲನೆ ನೀಡಿದರು.
ಮಸೀದಿಗೆ ಸೇರಿದ ಜಾಗದಲ್ಲಿ ಪ್ರಾಥನಾ ಮಂದಿರ, ವಜೂಖಾನ, ಶೌಚಗೃಹ ಮತ್ತು ಹುಲಿಕರೆ ಗ್ರಾ.ಪಂ ವ್ಯಾಪ್ತಿಯ ಮಸ್ಸೀದ್ ಎ- ಮಹಿಯೊದ್ದಿನ್ ಸುನ್ನಿ ಮಸೀದಿಗೆ ಸೇರಿದ ಜಾಗದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ವಕ್ಫ್ ಸಚಿವರು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಿದ್ದಾರೆ. ಕೆ.ಆರ್.ಸಾಗರ ವ್ಯಾಪ್ತಿಯಲ್ಲಿ ಮುಸ್ಲಿಂ ಮತ್ತು ಹಿಂದು ಸಮುದಾಯದವರು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಮಸೀದಿಗೆ ಸೇರಿದ ಜಾಗದಲ್ಲಿ ಕಾಂಪೌಂಡ್‌ನೊಂದಿಗೆ ಶಾದಿ ಮಹಲ್ ಕೂಡ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ವಕ್ಫ್ ಮಂಡಳಿ ಅಧ್ಯಕ್ಷ ಅನ್ವರ್ ಭಾಷಾ ಮಾತನಾಡಿ, ಇಲ್ಲಿನ ಮಸೀದಿಯಲ್ಲಿ ಉತ್ತಮ ಜಾಗವಿದ್ದು, ಮಂಡಳಿಯಿಂದ ಸಿಗುವ ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬೇಕು ಎಂದರು.
ವಕ್ಫ್ ಮಂಡಳಿ ಜಿಲ್ಲಾಧ್ಯಕ್ಷ ಜಬಿವುಲ್ಲಾಖಾನ್, ಕೆ.ಆರ್.ಸಾಗರ ಮಸ್ಸೀದ್ ಎ-ಮಹಿಯೊದ್ದಿನ್ ಸುನ್ನಿ ಮಸೀದಿ ಅಧ್ಯಕ್ಷ ದಸ್ತಗೀರ್, ಉಪಾಧ್ಯಕ್ಷ ಏಜಾಸ್ ಪಾಷಾ, ಕಾರ್ಯದರ್ಶಿ ಅಜಾದ್ ಷರಿಫ್, ಖಚಾಂಚಿ ಅಜರುದ್ದಿನ್, ಕೆ.ಆರ್.ಸಾಗರ ಗ್ರಾಪಂ ಉಪಾಧ್ಯಕ್ಷ ರವಿಶಂಕರ್, ಹುಲಿಕರೆ ಗ್ರಾಪಂ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ವೈರುಮುಡಿ, ಕೆ.ಆರ್.ಸಾಗರ ಗ್ರಾ.ಪಂ ಮಾಜಿ ಅಧ್ಯಕ್ಷ ಎಂ.ಬಿ.ಕುಮಾರ್, ಸದಸ್ಯ ರವಿಕುಮಾರ್ ಇತರರು ಇದ್ದರು.