ನರೇಗಲ್ಲ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಪ್ರಾರಂಭ ಮಾಡಲಾಗಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು ಎಂದು ಅಬ್ಬಿಗೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿದ್ದಪ್ಪ ಹನುಮನಾಳ ಹೇಳಿದರು. ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ಶುಕ್ರವಾರ ಹೆಸರು ಕಾಳು ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿಮಾತನಾಡಿದರು. ಪ್ರತಿ ಕ್ವಿಂಟಾಲ್‌ಗೆ ರೂ. 8682.00 ಬೆಲೆ ನಿಗದಿ ಮಾಡಲಾಗಿದೆ ಎಂದರು. ಸುರೇಶ ಬಸವರಡ್ಡೇರ, ಶಿವಪುತ್ರಪ್ಪ ತೆಗ್ಗಿನಕೇರಿ, ಈರಪ್ಪ ತಳವಾರ, ಲಕ್ಷ್ಮವ್ವ ಡಂಬಳ, ಅಂದಪ್ಪ ದ್ವಾಸಲಕೇರಿ, ನಾಗನಗೌಡ ಚನ್ನಪಗೌಡ್ರ, ಶಿವನಗೌಡ ಶಲವಡಿ, ವಿಜಯಕುಮಾರ್ ಪಾಟೀಲ, ಇತರರಿದ್ದರು.