ಸವಣೂರ: ರಸ್ತೆ ಬದಿ ನಿಂತಿದ್ದ ಚಕ್ಕಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ತಾಲೂಕಿನ ಮಂಟಗಣಿಯಲ್ಲಿ ನಡೆದಿದೆ.
ಮಾರುತಿ ಕೋಟೆಪ್ಪ ಬಳ್ಳಾರಿ (35) ಮೃತ ಸವಾರ.
ಈತ ಬಂಕಾಪುರ ಟೋಲ್‌ನಾಕಾದಿಂದ ಕುರುಬರಮಲ್ಲೂರ ಗ್ರಾಮಕ್ಕೆ ತೆರಳುತ್ತಿದ್ದ ಸಮಯದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಎತ್ತಿನ ಚಕ್ಕಡಿಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.