ಮಹಾಶಿವರಾತ್ರಿ ಅಂಗವಾಗಿ ಬೇಲೂರಿನ ಶ್ರೀ ಪ್ರಸನ್ನ ನಂಜುಂಡೇಶ್ವರ ದೇಗುಲದಲ್ಲಿ ಅರ್ಚಕರು ವೇದಘೋಷ ಪಟಿಸುತ್ತಿರುವುದು. 
ಜಿಲ್ಲೆ

ಸಾಲಿನಲ್ಲಿ ನಿಂತು ದರ್ಶನ

ಅಭಿನಯ್ ಎಚ್.ಎಂ

ಬೇಲೂರು: ಮಹಾ ಶಿವರಾತ್ರಿ ಅಂಗವಾಗಿ ಪಟ್ಟಣ ಹಾಗೂ ತಾಲೂಕಿನಾದ್ಯಂತ ಇರುವ ಶಿವ ದೇಗುಲ ಹಾಗೂ ಇತರ ದೇಗುಲಗಳಲ್ಲಿ ಬುಧವಾರ ವಿಶೇಷ ಪೂಜೆ ನೆರವೇರಿತು.

ಭಕ್ತರು ಪೂಜೆಯಲ್ಲಿ ಹರ್ಷದಿಂದ ಪಾಲ್ಗೊಂಡು ದೇವರ ದರ್ಶನ ಪಡೆದರು. ಪಟ್ಟಣದಲ್ಲಿ ಪ್ರಮುಖವಾಗಿ ಚನ್ನಕೇಶವಸ್ವಾಮಿ, ಪಾತಾಳೇಶ್ವರ, ಶ್ರೀ ಪ್ರಸನ್ನ ನಂಜುಂಡೇಶ್ವರ, ಶ್ರೀ ಶಂಕರ ಲಿಂಗೇಶ್ವರ, ವೀರಶೈವ ಕಲ್ಯಾಣ ಮಂಟಪ ಸಮೀಪವಿರುವ ಈಶ್ವರ ದೇಗುಲ, ಯಗಚಿ ಸೇತುವೆ ಸಮೀಪವಿರುವ ಈಶ್ವರ ದೇವಸ್ಥಾನ ಸೇರಿದಂತೆ ತಾಲೂಕಿನ ಎಲ್ಲ ದೇಗುಲಗಳಲ್ಲೂ ವಿಶೇಷ ಪೂಕಾ ಕೈಂಕರ್ಯ ನೆರವೇರಿತು. ಭಕ್ತರು ಕಿಲೋಮೀಟರ್‌ಗಟ್ಟಲೇ ಸಾಲಿನಲ್ಲಿ ನಿಂತು ಕುಟುಂಬ ಸಮೇತ ದೇವರ ದರ್ಶನ ಪಡೆದರು.