ಜಿಲ್ಲೆ

ಬೆಂಗಳೂರು ಕಾಲ್ತುಳಿತ ಸಿದ್ದಾಪುರ ಮೂಲದ ಗೃಹಿಣಿ ಸಾವು

Uttara Kannada - Subash Hegde
ಸಿದ್ದಾಪುರ: ಬೆಂಗಳೂರಿನ‌ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರಲ್ಲಿ ಸಿದ್ದಾಪುರದ ಗೃಹಿಣಿ ಸೇರಿದ್ದಾರೆ. ಆರ್ ಸಿಬಿ ಅಭಿಮಾನಿಯಾಗಿದ್ದ ಸಿದ್ದಾಪುರ ತಾಲೂಕಿನ ಅಕ್ಷತಾ ಪೈ ಮೃತರು. ಅವರು ಬೆಂಗಳೂರಿನಲ್ಲಿ  ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದರು ಅಕ್ಷತಾ ಮೂಲತಃ ಉಡುಪಿ ಜಿಲ್ಲೆ ಮೂಲ್ಕಿಯವರು. ಸಿದ್ದಾಪುರದ ಸೊಸೆ. ಮೃತ ಶರೀರವನ್ನು ಸಿದ್ದಾಪುರಕ್ಕೆ ತರಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.