ಜಿಲ್ಲೆ

ಕಾಲ್ತುಳಿತ ಪ್ರಕರಣ, ದೊಡ್ಡಮಟ್ಟದಲ್ಲಿ ಸರ್ಕಾರದ್ದೇ ಲೋಪ

ನವೀನ ಬಿ.ಎಂ

ಶಿವಮೊಗ್ಗ: ಬೆಂಗಳೂರಿನಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರದ್ದೇ ದೊಡ್ಡ ವೈಫಲ್ಯವಿದೆ. ಹಾಗಾಗಿ ಸಿಎಂ, ಡಿಸಿಎಂ ರಾಜೀನಾಮೆ ಕೊಡಬೇಕು ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ, ಎಂಎಲ್‌ಸಿ ಡಿ.ಎಸ್.ಅರುಣ್ ಆಗ್ರಹಿಸಿದರು.

ಗುಪ್ತಚರ ಇಲಾಖೆ ಅಭಿಮಾನಿಗಳು ಸೇರುವುದನ್ನು ಅಂದಾಜಿಸುವಲ್ಲಿ ವಿಫಲವಾಗಿದೆ. ನಾವು ಸರ್ಕಾರದ ವಿರುದ್ಧ ಬರೀ ಆರೋಪ ಮಾಡುತ್ತಿಲ್ಲ. ಸತ್ಯಾಂಶ ಕಣ್ಮುಂದೆಯೇ ಇದೆ. ವಿಧಾನಸೌಧವರೆಗೆ ಬಸ್‌ನಲ್ಲಿ ಬಂದು, ಅಲ್ಲಿಂದ ಮೆರವಣೆಗೆ ಮೂಲಕ ಕೆಎಸ್‌ಸಿಎ ಕ್ರೀಡಾಂಗಣಕ್ಕೆ ತೆರಳಬೇಕಿತ್ತು. ಆದರೆ ಏಕಾಏಕಿ ಭದ್ರತೆ ನೆಪವೊಡ್ಡಿ ಮೆರವಣಿಗೆ ರದ್ದು ಮಾಡಿದರು. ಕೆಎಸ್‌ಸಿಎ, ಆರ್‌ಸಿಬಿ ಲೋಪವೂ ಇದೆ. ಸರ್ಕಾರದ ಲೋಪವೂ ದೊಡ್ಡ ಮಟ್ಟದಲ್ಲಿದೆ ಎಂದರು.