ಕೋಲಾರ; ಸಮ ಸಮಾಜ ನಿಮಾರ್ಣ, ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ಅಂಬೇಡ್ಕರ್ ನೀಡಿದ್ದಾರೆ. ಸಂವಿಧಾನದಡಿ ಕಾರ್ಯನಿರ್ವಹಿಸುವ ನಾವು ನೀವೇಲ್ಲರೂ ಅದರ ರಕ್ಷಣೆಗೆ ಪಣತೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ನಗರದಲ್ಲಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜಯಂತಿಯಲ್ಲಿ ಮಾತನಾಡಿದ ಅವರು,
ಬಾಬಾ ಸಾಹೇಬ್ ಎಂದೇ ಜನಪ್ರಿಯರಾಗಿದ್ದ ಭೀಮರಾವ್ ರಾಮ್ ಜೀ ಅಂಬೇಡ್ಕರ್ ಅವರನ್ನು ಮಹಾನ್ ಮಾನವತಾವಾಧಿ ಎಂದರೆ ತಪ್ಪಾಗಲಾರದು ಎಂದು ಬಣ್ಣಿಸಿದರು. ಊಳಿಗಮಾನ್ಯ ಅಸಮಾನತೆ ಮತ್ತು ಜಾತಿ ವ್ಯವಸ್ಥೆಯ ಸಾಮಾಜಿಕ ದುಷತ್ಯಗಳನ್ನು ಬೇರು ಸಮೇತ ಕಡಿದು ಹಾಕುವ ಮೂಲಕ ಸಮಾಜವನ್ನು ಪುನರ್ ನಿರ್ಮಿಸುವ ಗುರಿಯೊಂದಿಗೆ ಅವರ ತೀವ್ರ ಹೋರಾಟದ ಫಲವಾಗಿಯೇ ನಾವುಗಳು ಜನಪ್ರತಿನಿಧಿಗಳಾಗಿ ತಮ್ಮ ಮುಂದೆ ಇದ್ದೇವೆ ಎಂದರು.
ದಲಿತರ ವಿರುದ್ಧದ ಸಾಮಾಜಿಕ ತಾರತಮ್ಯವನ್ನು ಕೊನೆಗೊಳಿಸಲು ಬಯಸಿದ್ದ ಅವರು ಬಹುಪಾಲು ಯಶಸ್ಸನ್ನು ಕಂಡಿದ್ದರು. ಅಸ್ಪ-----ೃಶ್ಯತೆಯ ವಿರುದ್ಧ ನಿರಂತರ ಹೋರಾಟದಲ್ಲಿ ಶ್ರಮಿಸಿದ್ದರು. ಜಗತ್ತೇ ಮೆಚ್ಚುವ ದೇಶದ ಸಂವಿಧಾನ ರಚನೆಗೂ ಇದು ಅವರಿಗೆ ಸ್ಪೂರ್ತಿಯ ಸೆಲೆಯಾಯಿತು ಎನ್ನುವುದನ್ನು ಯಾರೂ ಮರೆಯಬಾರದು ಎಂದು ತಿಳಿಸಿದರು.
ಸಂಸದ ಎಂ.ಮಲ್ಲೇಶ್ ಬಾಬು, ಶಾಸಕ ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್ಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಸಿಇಒ ಪ್ರವಿಣ್ ಪಿ.ಬಾಗೇವಾಡಿ, ಎಸ್ಪಿಗಳಾದ ಕೋಲಾರ ಬಿ.ನಿಖಿಲ್, ಕೆಜಿಎ್ ಶಾಂತಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೆರವಣಿಗೆಯು ನಗರದ ಡೂಂ ಲೈಟ್ ವೃತ್ತ , ಯೋಗಿ ನಾರೇಯಣ ವೃತ್ತ, ಕ್ಲಾಕ್ ಟವರ್, ಹೊಸ ಬಸ್ ನಿಲ್ದಾಣ, ಅಮ್ಮವಾರಿಪೇಟೆ ವೃತ್ತ, ಮೆಕ್ಕೆ ವೃತ್ತ ಮಾರ್ಗವಾಗಿ ಟಿ.ಚನ್ನಯ್ಯ ರಂಗಮಂದಿರದ ಸಮೀಪ ಕೊನೆಗೊಂಡಿತು.
ಮಾಜಿ ಸಂಸದ ಎಸ್.ಮುನಿಸ್ವಾಮಿ ತಮಟೆ ಬಾರಿಸಿ, ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಮೆರವಣಿಗೆಯಲ್ಲಿ ಗಮನ ಸೆಳೆದರು. ವಿವಿಧ ಕಲಾ ತಂಡಗಳು ಸಾಥ್ ನೀಡಿದ್ದು, ಡಿಜೆ, ತಮಟೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿದರು. ಮೆರವಣಿಗೆಯ ಮಾರ್ಗದಲ್ಲಿ ಪಾನಕ, ಮಜ್ಜಿಗೆ ವಿತರಿಸಲಾಯಿತು.
ನಗರಸಭೆ ಅಧ್ಯಕ್ಷೆ ಲಕ್ಷಿ$್ಮದೇವಮ್ಮ, ಉಪಾಧ್ಯಕ್ಷೆ ಸಂಗೀತಾ ಜಗದೀಶ್, ಎಡಿಸಿ ಮಂಗಳಾ, ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಎಚ್.ಪಿ.ಎಸ್, ತಹಸೀಲ್ದಾರ್ ಎಂ.ನಯನಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸನ್ ಇದ್ದರು.
ಮೆರವಣಿಗೆ ಜಟಾಪಟಿ
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಪಲ್ಲಕ್ಕಿಗಳು, ಸ್ತಭ್ಧಚಿತ್ರಗಳ ಮೆರವಣಿಗೆಯು ಎಸ್.ಎನ್.ಆರ್. ಆಸ್ಪತ್ರೆ ಮುಂಭಾಗದಿಂದ ಎಂಜಿ ರಸ್ತೆ ಮೂಲಕ ತೆರಳಲು ಮಾರ್ಗ ನಿಗದಿಪಡಿಸಲಾಯಿತು. ಮಾಜಿ ಸಂಸದ ಎಸ್.ಮುನಿಸ್ವಾಮಿ ಕ್ಲಾಕ್ ಟವರ್ ಮೂಲಕವೇ ಸಾಗಬೇಕೆಂದು ಪಟ್ಟು ಹಿಡಿದಿದ್ದರು. ಜಿಲ್ಲಾಧಿಕಾರಿ ಒಪ್ಪಿಗೆ ನೀಡಿದ್ದರೂ ಪೊಲೀಸ್ ವರಿಷ್ಠಾಧಿಕಾರಿ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಎಸ್.ಮುನಿಸ್ವಾಮಿ ತಂದರು. ಆಗ ಸಚಿವರು, ಕ್ಲಾಕ್ ಟವರ್ ಮೂಲಕವೇ ಕಳುಹಿಸಿ ಎಂದು ಸೂಚಿಸಿದರು. ಆದರೂ ಸಹ ಎಸ್.ಮುನಿಸ್ವಾಮಿ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ಗೆ ಅಡ್ಡಪಡಿಸಲಾಯಿತು. ಅಲ್ಲದೆ, ಜಿಲ್ಲಾಸ್ಪತ್ರೆ ಮುಂಭಾಗ ಪೊಲೀಸ್ ವಾಹನಗಳನ್ನು ಅಡ್ಡ ನಿಲ್ಲಿಸಿದ್ದರು. ಬಳಿಕ ವಾಹನಗಳನ್ನು ಪಕ್ಕಕ್ಕೆ ಕಳುಹಿಸಿ ಮೆರವಣಿಗೆ ತೆರಳಲು ಅವಕಾಶ ಕಲ್ಪಿಸಲಾಯಿತು.