ಜಿಲ್ಲೆ

ಸಿಬ್ಬಂದಿಗೆ ಸಮರ್ಪಣೆ ಭಾವ ಅಗತ್ಯ

ಮರಿದೇವ ಹೂಗಾರ

ಹುಬ್ಬಳ್ಳಿ: ಕಿಮ್ಸ್​ನ ವೈದ್ಯಕೀಯ ಸಿಬ್ಬಂದಿ ಸಮರ್ಪಣೆ ಭಾವದಿಂದ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪ್ರೋತ್ಸಾಹ ಸಿಗುತ್ತಿದೆ ಎಂದು ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಹೇಳಿದರು.

ನಗರದ ಕಿಮ್್ಸ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಾರ್ವಜನಿಕ ಆರೋಗ್ಯ ಕೇಂದ್ರ ಪುನಸ್ಚೇತನಗೊಳಿಸುವ (ಕಾಯಕಲ್ಪ) ಸ್ವಚ್ಛತಾ ಆರೋಗ್ಯ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೋಗಿಗಳ ಬಗ್ಗೆ ಕಾಳಜಿವಹಿಸಿ ಕೆಲಸ ಮಾಡಿದರೆ ಅದೇ ದೇವರ ಸೇವೆ. ಈ ಮನೋಭಾವ ಹೊಂದಿದ್ದರೆ ಸಾಕು ಎಂಥ ಕೆಲಸವೂ ಸರಳವಾಗಲಿದೆ ಎಂದರು.

ಆರೋಗ್ಯ ಗುಣಮಟ್ಟ ವಿಭಾಗದ ನೋಡಲ್ ಅಧಿಕಾರಿ ಡಾ. ರಾಜಶೇಖರ ದ್ಯಾಬೇರಿ ಮಾತನಾಡಿ, ಕಾಯಕಲ್ಪ ಎನ್ನುವುದು ಚಿಕಿತ್ಸಾ ಪದ್ಧತಿ. ಆರೋಗ್ಯ ಸಿಬ್ಬಂದಿ ಸೇವೆಯನ್ನು ನೋಡಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಅನುದಾನ ನೀಡಿ ಪ್ರೋತ್ಸಾಹಿಸುತ್ತದೆ. ಈ ಬಾರಿ ಕಾಯಕಲ್ಪದಡಿ ಅನುದಾನ ನಮ್ಮ ಕಿಮ್ಸ್​ಗೆ ಲಭಿಸಿದೆ. ಈ ಸೇವೆ ಹೀಗೆ ಮುಂದುವರಿಯಬೇಕು ಎಂದು ಹೇಳಿದರು.

ಸ್ವಚ್ಛತೆಯ ಅರಿವು ಕುರಿತು ಕಿಮ್ಸ್​ನ ವೈದ್ಯಕೀಯ ಸಿಬ್ಬಂದಿ ಕಿರು ನಾಟಕ ಪ್ರದರ್ಶಿಸಿದರು.

ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಚವ್ಹಾಣ, ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಡಾ. ಎಸ್.ವೈ. ಮುಲ್ಕಿಪಾಟೀಲ, ಆರ್​ಎಂಒ ಡಾ. ಸಿದ್ದೇಶ್ವರ ಕಟಕೋಳ, ಶುಶ್ರೂಷಾಧಿಕಾರಿ ಪದ್ಮಾವತಿ ಪಿ., ಆವರಣಾಧಿಕಾರಿಗಳು ಇತರರು ಇದ್ದರು.