ಸುಬ್ರಹ್ಮಣ್ಯ: ಯುವ ಜನಾಂಗ ಆಧುನಿಕ ಯುಗದಲ್ಲಿ ಸೇವೆ ಮತ್ತು ಸಹಕಾರ ಮನೋಭಾವನೆ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ. ಪರೋಪಕಾರ ಮತ್ತು ಇತರರಿಗೆ ಸಹಾಯ ನೀಡುವ ಮನಸ್ಸು ಯುವಕರಿಗೆ ಅಗತ್ಯ ಎಂದು ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿ ಹೇಳಿದರು.
ಬಳ್ಪ ಗ್ರಾಮದ ಎಣ್ಣೆಮಜಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬಳ್ಪ ಗ್ರಾಪಂ ಅಧ್ಯಕ್ಷ ಹರ್ಷಿತ್ ಕಾರ್ಜ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಸೋಮಶೇಖರ ನಾಯಕ್, ಎಸ್‌ಡಿಎಂಸಿ ಅಧ್ಯಕ್ಷ ಚಂದ್ರನಾಥ, ಮುಖ್ಯ ಶಿಕ್ಷಕಿ ಶಾಲಿನಿ, ರೋಟರಿ ಪೂರ್ವಾಧ್ಯಕ್ಷ ಗೋಪಾಲ್ ಎಣ್ಣೆಮಜಲು, ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷೆ ತ್ರಿವೇಣಿ ದಾಮ್ಲೆ, ಯೋಜನಾಧಿಕಾರಿಗಳಾದ ಸೌಮ್ಯಾ ದಿನೇಶ್, ಪೂರ್ಣಿಮಾ, ಘಟಕ ನಾಯಕರಾದ ಸ್ವಸ್ತಿಕ್ ಕೆ., ಹರ್ಷಿತಾ ಎಸ್. ಮೊದಲಾದವರಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಚಂದ್ರನಾಥ ಪಟೂಳಿ ಧ್ವಜಾರೋಹಣ ನೆರವೇರಿಸಿದರು.