ಜಿಲ್ಲೆ

ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುತ್ತಿದ್ದಾಗಲೇ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ಸೇರಿದ್ದ ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪರ್​

Webdesk - Ravikanth

ಬಾಗಲಕೋಟೆ: ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುತ್ತಿದ್ದಾಗಲೇ ಉಸಿರಾಟದ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಈಗ ರಾಜ್ಯಕ್ಕೇ ಟಾಪರ್ ಎನಿಸಿಕೊಂಡಿದ್ದಾಳೆ. ಬಾಗಲಕೋಟೆ ಜಿಲ್ಲೆ ಮುಚಖಂಡಿ ತಾಂಡಾದ ಗಂಗಮ್ಮ ಬಸವರಾಜ್ ಹುಡೇದ ಎಂಬಾಕೆಯೇ ಈ ವಿದ್ಯಾರ್ಥಿನಿ.

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿರುವ ಈಕೆ ಮುಚಖಂಡಿ ಗ್ರಾಮದ ದುರ್ಗಾದೇವಿ ಪ್ರೌಢಶಾಲೆಯ ವಿದ್ಯಾರ್ಥಿನಿ. ಈಕೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುವಾಗಲೇ ಉಸಿರಾಟ ತೊಂದರೆಗೆ ಒಳಗಾಗಿದ್ದು, ಪರೀಕ್ಷೆ ಮುಗಿಯುತ್ತಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ 20 ದಿನಗಳಿಂದ ಮನೆಯಲ್ಲಿಯೇ ಆಕ್ಸಿಜನ್​ ಮೇಲಿರುವ ಈ ವಿದ್ಯಾರ್ಥಿನಿ, ಟಾಪರ್ ಆದ ಖುಷಿಯಲ್ಲಿ ತನ್ನ ಸಂಕಷ್ಟವನ್ನು ಸ್ವಲ್ಪಮಟ್ಟಿಗೆ ಮರೆಯುವಂತಾಗಿದೆ.

ಕರೊನಾ ಮಧ್ಯದಲ್ಲೂ ಬಿಟ್ಟೂಬಿಡದೆ ಆನ್​ಲೈನ್​ ಕ್ಲಾಸ್, ನಿರಂತರ ಓದು ತನ್ನ ಯಶಸ್ಸಿನ ಗುಟ್ಟು ಎಂದ ಗಂಗಮ್ಮ ಹೇಳಿಕೊಂಡಿದ್ದಾಳೆ. ಮಗಳ ಸಾಧನೆಗೆ ತಂದೆ ಬಸವರಾಜ್​, ತಾಯಿ ಗೀತಾ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಿದೆ.