ಜಿಲ್ಲೆ

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯಾಗಲಿ

ಕವಿತಾಳ: ವಿದ್ಯಾರ್ಥಿ ಜೀವನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಿಇಒ ಚಂದ್ರಶೇಖರ ದೊಡ್ಡಮನಿ ಹೇಳಿದರು.

ಪಾಮನಕಲ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಸೋಮವಾರ ಮಾತನಾಡಿದರು. ಸರ್ಕಾರ ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕಳೆದ ಸಲ ಈ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಕುಂಠಿತವಾಗಿತ್ತು. ಮುಂದಿನ ಸಲ ಉತ್ತಮ ಫಲಿತಾಂಶ ಬರಬೇಕೆಂದರು.

ವಿದ್ಯಾರ್ಥಿಗಳು ಇನ್ನೂ ಚೆನ್ನಾಗಿ ಬರೆಯಬೇಕು. ಗಣಿತ, ಇಂಗ್ಲಿಷ್, ಹಿಂದಿ ವಿಷಯಗಳು ಕಠಿಣವೆನಿಸಿದರೆ ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳಬೇಕು. ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ನನ್ನನ್ನು ಸಂಪರ್ಕಿಸಿ ಎಂದರು. ಬಹಳಷ್ಟು ವಿದ್ಯಾರ್ಥಿಗಳು ಬಿಇಒ ಕೇಳಿದ ಪ್ರಶ್ನೆಗಳಿಗೆ ಸಮಪರ್ಕ ಉತ್ತರ ಕೊಟ್ಟರೆ, ಕೆಲ ವಿದ್ಯಾರ್ಥಿಗಳು ಉತ್ತರ ಕೊಡಲು ಪರದಾಡಿದರು.