ಜಿಲ್ಲೆ

ಪಿಯು, ಎಸ್‌ಎಸ್‌ಎಲ್‌ಸಿ ಫಲಿತಾಂಶ ದ.ಕ.ಜಿಲ್ಲೆಗೆ ಹೆಮ್ಮೆ: ಜಿಲ್ಲಾಧಿಕಾರಿ, ದ.ಕ.ಜಿಪಂ ಸಿಇಒ ಶ್ಲಾಘನೆ

Mangaluru - Hariprasad Rai



ಮಂಗಳೂರು : ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ದ.ಕ.ಜಿಲ್ಲೆ ಪ್ರಥಮ ಸ್ಥಾನ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಬಗ್ಗೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ದ.ಕ.ಜಿಲ್ಲಾ ಪಂಚಾಯಿತಿಯ ಸಿಇಒ ಡಾ.ಆನಂದ.ಕೆ. ಹರ್ಷ ವ್ಯಕ್ತ ಪಡಿಸಿದ್ದು, ಇದು ದ.ಕ.ಜಿಲ್ಲೆಗೆ ಹೆಮ್ಮೆಯ ವಿಷಯ ಎಂದು ಹೇಳಿಕೆ ನೀಡಿದ್ದಾರೆ. ಉತ್ತಮ ಫಲಿತಾಂಶ ದಾಖಲಿಸಲು ಶ್ರಮಿಸಿದ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಅವರು ಅಭಿನಂದಿಸಿದ್ದಾರೆ.
ಕಳೆದ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಜಿಲ್ಲೆಯ 125 ಪ್ರೌಢಶಾಲೆಗಳು ಶೇ.ನೂರು ಫಲಿತಾಂಶ ದಾಖಲಿಸಿದ್ದರೆ , ಈ ಬಾರಿ 270
ಶಾಲೆಗಳು ಈ ಸಾಧನೆ ಮಾಡಿವೆ. ಕಳೆದ ವರ್ಷ 35 ಸರ್ಕಾರಿ ಪ್ರೌಢಶಾಲೆಗಳು ಶೇ.ನೂರು ಫಲಿತಾಂಶ ದಾಖಲಿಸಿದ್ದರೆ , ಈ ಬಾರಿ 84ಕ್ಕೆ ಏರಿಕೆಯಾಗಿದೆ. ಪಿಯುಸಿಯಲ್ಲೂ ಕಳೆದ ವರ್ಷ 37 ಕಾಲೇಜುಗಳು ಶೇ.ನೂರು ಫಲಿತಾಂಶ ದಾಖಲಿಸಿದ್ದರೆ , ಈ ಬಾರಿ 59ಕ್ಕೆ
ಏರಿಕೆಯಾಗಿದೆ. ಕಳೆದ ಬಾರಿ 9 ವಿದ್ಯಾರ್ಥಿಗಳು ರ‌್ಯಾಂಕ್ ಗಳಿಸಿದ್ದರೆ, ಈ ಬಾರಿ 25 ವಿದ್ಯಾರ್ಥಿಗಳು ರ‌್ಯಾಂಕ್ ಗಳಿಸಿದ್ದಾರೆ. ಇದು ಅತ್ಯುತ್ತಮ ಪ್ರಗತಿಯಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಶ್ಲಾಘಿಸಿದ್ದಾರೆ.
ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ದಾಖಲಾಗಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿದ್ದರು. ಹಿಂದಿನ ವರ್ಷ ಕಡಿಮೆ ಫಲಿತಾಂಶ ಬಂದ ಶಾಲೆಗಳನ್ನು ಗುರುತಿಸಿ ಪೂರಕ ಕ್ರಮ ಕೈಗೊಂಡಿದ್ದರು. ವಿಷಯವಾರು ಅಂಕಗಳನ್ನು ಪರಿಶೀಲಿಸಿ ಕಲಿಕೆಯಲ್ಲಿ ಹಿಂದೆ ಇದ್ದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕ್ಲಾಸ್ ನಡೆಸಲಾಗಿತ್ತು. ಪೋಷಕರು ಮತ್ತು ಶಿಕ್ಷಕರು
ಉತ್ತಮ ಸಹಕಾರ ನೀಡಿದ್ದು ಯಶಸ್ವಿಗೆ ಕಾರಣ ಎಂದು ದ.ಕ.ಜಿಲ್ಲಾ ಪಂಚಾಯಿತಿಯ ಸಿಇಒ ಡಾ.ಆನಂದ.ಕೆ. ತಿಳಿಸಿದ್ದಾರೆ.
...........................