ಶಿವರಾಜ ಎಂ ಬೆಂಗಳೂರು ಗ್ರಾಮಾಂತರ
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಲಿತಾಂಶದಲ್ಲಿ ರಾಜ್ಯದಲ್ಲಿ 9ನೇ ಸ್ಥಾನ ಕಾಯ್ದುಕೊಂಡ ಗ್ರಾಮಾಂತರ ಜಿಲ್ಲೆಯಲ್ಲಿ ದಾಖಲೆ ಅಂಕಗಳನ್ನು ಗಳಿಸುವ ಮೂಲಕ ವಿದ್ಯಾರ್ಥಿಗಳು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಅದರಲ್ಲೂ ಅನುದಾನ ರಹಿತ ಎರಡು ಶಾಲೆಗಳಿಂದ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ 623 ಅಂಕ, ಇದೇ ಮತ್ತೊಬ್ಬ ವಿದ್ಯಾರ್ಥಿನಿ ಪಡೆಯುವ ಮೂಲಕ ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬುದನ್ನು ಖಾತ್ರಿಪಡಿಸಿದ್ದಾನೆ. ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯೊಬ್ಬ 616 ಅಂಕ ಪಡೆದು ಸರ್ಕಾರಿ ಶಾಲೆಗಳಲ್ಲೂ ಶಿಕ್ಷಣದ ಗುಣಮಟ್ಟದಲ್ಲಿ ರಾಜಿ ಇಲ್ಲ ಎಂಬುದನ್ನು ತೋರಿಸಿದ್ದಾರೆ. ಈ ಬಾರಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಲಿತಾಂಶದ ಬಗ್ಗೆ ಇಡೀ ಜಿಲ್ಲಾಡಳಿತ ಹೆಮ್ಮೆಪಟ್ಟಿದ್ದು, ಸಾಧಕ ವಿದ್ಯಾರ್ಥಿಗಳನ್ನು ಶಕ್ತಿ ಕೇಂದ್ರ ಜಿಲ್ಲಾಡಳಿತಭವನದಲ್ಲಿ ಸನ್ಮಾನಿಸುವ ಮೂಲಕ ವಿದ್ಯಾರ್ಥಿಗಳ ಬೆನ್ನುತಟ್ಟಿದೆ. ಜಿಲ್ಲೆಯ ಶಿಕ್ಷಣ ತಜ್ಞರು ಈ ಬಾರಿಯ ಲಿತಾಂಶವನ್ನು ಕ್ಯಾಲಿಟಿ ರಿಸಲ್ಟ್ ಎಂದು ವಿಶ್ಲೇಷಿಸಿದ್ದಾರೆ.
850 ವಿದ್ಯಾರ್ಥಿಗಳು ಎ+: ಕಳೆದ ನಾಲ್ಕೈದು ವರ್ಷದ ಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ 850 ವಿದ್ಯಾರ್ಥಿಗಳು ಎ ದರ್ಜೆ ಹಾಗೂ ಎ+ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಅದೇ ರೀತಿ ವಿಷಯವಾರು ಸುಮಾರು 700 ವಿದ್ಯಾರ್ಥಿಗಳು ಪೂರ್ಣಂಕ ಪಡೆದಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ಆಂಗ್ಲ ಭಾಷೆ ಕಬ್ಬಿಣದ ಕಡಲೆ ಎಂಬ ಮಾತು ಸಹಜ. ಆದರೆ ಈ ಬಾರಿ ಗ್ರಾಮೀಣ ಭಾಗದ ಅದರಲ್ಲೂ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಇವೆರಡು ವಿಷಯಗಳಲ್ಲಿ ಪೂರ್ಣಾಂಕ ಪಡೆಯುವ ಮೂಲಕ ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು ನಿರೂಪಿಸಿದ್ದಾರೆ.
ಸಾಧಕರ ಪಟ್ಟಿ: ಅನುದಾನ ರಹಿತ ಶಾಲೆಯ ಸಿ.ಭಾವನಾ ಹಾಗೂ ಎಂ.ಸಿ.ರಂಜಿತಾ ಪೂರ್ಣಾಂಕ ಪಡೆಯುವ ಮೂಲಕ ಪ್ರಥಮ ಶ್ರೇಣಿಯಲ್ಲಿದ್ದರೆ,ಎಸ್.ರೋಹನ್‌ರಾಜ್,ಎಸ್.ತೇಜಸ್, ಲಿಖಿತಾ ಹಾಗೂ ಎಂ.ಎಸ್.ಅಮೃತಾ ಕೇವಲ 1 ಅಂಕ ವಂಚಿತರಾಗಿ ಎರಡನೇ ಶ್ರೇಣಿಯಲ್ಲಿದ್ದಾರೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮೋಹನ್623 ಹಾಗೂ ಐಶ್ವರ್ಯ 618 ಅಂಕ ಗಳಿಸಿ ಸರ್ಕಾರಿ ವಸತಿ ಶಾಲೆಗೆ ಕೀರ್ತಿ ತಂದಿದ್ದಾರೆ. ಗಾನವಿ 623, ಅನುದಾನ ರಹಿತ ಶಾಲೆಯ ಸಚಿನ್ ತೇಜಸ್ 622), ತನುಶ್ರೀ 622, ಹನಿ ಕೃತಿ 622 ಕೆ.ಎನ್.ಮೋಹಿತಾ 622 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ, ಆರ್.ನಿಶ್ವಿತಾ 617, ಹಾಗೂ ಸರ್ಕಾರಿ ಪ್ರೌಢಶಾಲೆಯ ಗೌತಮ್ ಮತ್ತು ಅನುದಾನಿತ ಶಾಲೆಯ ಯಾಮಿನಿ 616 ಅಂಕ ಪಡೆದು ಸಾಧಕರ ಸಾಲಿನಲ್ಲಿದ್ದಾರೆ.
ಬಿಜ್ಜವಾರ ಸರ್ಕಾರಿ ಶಾಲೆಗೆ ಶೇ.100 ಲಿತಾಂಶ: 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ರಲ್ಲಿ ದೇವನಹಳ್ಳಿ ತಾಲೂಕು ಬಿಜ್ಜವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿಯ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. 100 ಫಲಿತಾಂಶ ಪಡೆದು ಜಿಲ್ಲೆಗೆ ಮಾದರಿ ಶಾಲೆ ಎಂಬ ಹೆಮ್ಮೆ ತಂದುಕೊಟ್ಟಿದ್ದಾರೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಲಿತಾಂಶದ ಬಗ್ಗೆ ಮೂಗು ಮುರಿಯುತ್ತಿದ್ದವರ ಎದುರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತ ಸಾಧನೆ ಮಾಡುವ ಮೂಲಕ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಕಳೆದ ಸಾಲಿನಲ್ಲಿ 9ನೇ ಸ್ಥಾನ ಪಡೆದಿದ್ದ ಜಿಲ್ಲೆ ಈ ಬಾರಿಯೂ ಅದೇ ಸ್ಥಾನ ಕಾಯ್ದುಕೊಂಡಿದ್ದರೂ ಅಂಕ ಗಳಿಕೆಯಲ್ಲಿ ಈ ಬಾರಿ ದಾಖಲೆ ಬರೆದಿದೆ. ಅದರಲ್ಲೂ ರಾಜ್ಯಕ್ಕೆ ಎರಡು ರ‌್ಯಾಂಕ್ ಬಂದಿರುವುದು ಜಿಲ್ಲೆಯಲ್ಲಿನ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಸರ್ಕಾರಿ ಶಾಲೆ ಹಾಗೂ ವಸತಿ ಶಾಲೆಯ ಮಕ್ಕಳ ಸಾಧನೆ ನಿಜಕ್ಕೂ ಇತರರಿಗೆ ಮಾದರಿ ಎನ್ನಬಹುದು. ಕಳೆದ ಬಾರಿಗೆ ಹೋಲಿಸಿದರೆ 850 ಮಕ್ಕಳು ಎ ಹಾಗೂ ಎ+ ಶ್ರೇಣಿಯ ಅಂಕಗಳೊಂದಿಗೆ ತೇರ್ಗಡೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಬೈಲಾಂಜನಪ್ಪ, ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆ