ಜಿಲ್ಲೆ

ಇಬ್ಬರು ವಿದ್ಯಾರ್ಥಿನಿಯರಿಗೆ ಪೂರ್ಣಾಂಕ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಎಸ್‌ಎಸ್‌ಎಲ್‌ಸಿ ಲಿತಾಂಶದಲ್ಲಿ ಕಳೆದ ಸಾಲಿನಲ್ಲಿ 9ನೇ ಸ್ಥಾನ ಪಡೆದಿದ್ದ ಗ್ರಾಮಾಂತರ ಜಿಲ್ಲೆ ಪ್ರಸಕ್ತ ಸಾಲಿನಲ್ಲೂ ಅದೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದೆ. ಶೇ.73.71 ಲಿತಾಂಶ ಪಡೆದಿದ್ದು, ಇದೇ ಮೊದಲ ಬಾರಿಗೆ ಇಬ್ಬರು ವಿದ್ಯಾರ್ಥಿನಿಯರು ಪೂರ್ಣಾಂಕ ಪಡೆದು ಜಿಲ್ಲೆ ಕೀರ್ತಿ ತಂದಿದ್ದಾರೆ.

2019-20ನೇ ಸಾಲಿನಲ್ಲಿ ರಾಜ್ಯದಲ್ಲೇ 16 ನೇ ಸ್ಥಾನದಲ್ಲಿದ್ದ ಎಸ್ಸೆಸ್ಸೆಲ್ಸಿ ಲಿತಾಂಶ 2020-21ರಲ್ಲಿ ದಿಢೀರನೇ 3ನೇ ಸ್ಥಾನಕ್ಕೆ ಜಿಗಿದಿತ್ತು. ನಂತರ 2021-22ರಲ್ಲಿ 8 ನೇ ಸ್ಥಾನಕ್ಕೆ ಇಳಿದಿದ್ದ ಲಿತಾಂಶ ಕಳೆದ 2022-23ರಲ್ಲಿ ಮತ್ತೆ ನಾಲ್ಕನೇ ಸ್ಥಾನಕ್ಕೇರಿತ್ತು. 2023-24 ನೇ ಸಾಲಿನಲ್ಲಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಕಳೆದ ನಾಲ್ಕೈದು ವರ್ಷದ ಲಿತಾಂಶದಲ್ಲಿ ಸಾಕಷ್ಟು ಏರಿಳಿತ ಕಂಡುಬಂದಿದ್ದ ಜಿಲ್ಲೆಯಲ್ಲಿ ಈ ಬಾರಿ ಕಳೆದ ಸಾಲಿನ ಸ್ಥಾನದಲ್ಲೇ ಮುಂದುವರೆದಿದೆ.

ಬಾಲಕಿಯರೇ ಮೇಲುಗೈ: ಈ ಬಾರಿ ಎಸ್‌ಎಸ್‌ಎಲ್‌ಸಿ ಮೊದಲ ಬಾರಿ ಪರೀಕ್ಷೆ ಎದುರಿಸಿದ 13643 ವಿದ್ಯಾರ್ಥಿಗಳ ಪೈಕಿ 10057 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.73.71 ಫಲಿತಾಂಶ ದೊರಕಿದೆ.

ಪರೀಕ್ಷೆಗೆ 6803 ಬಾಲಕರು ಹಾಜರಾಗಿದ್ದು, 4576 ಬಾಲಕರು ತೇರ್ಗಡೆಯಾಗುವ ಮೂಲಕ ಶೇ. 67.26 ಫಲಿತಾಂಶ ಪಡೆದಿದ್ದಾರೆ. 6840 ಬಾಲಕಿಯರ ಪೈಕಿ, 5481 ಬಾಲಕಿಯರು ತೇರ್ಗಡೆ ಹೊಂದುವ ಮೂಲಕ ಶೇ 80.13 ಫಲಿತಾಂಶ ಪಡೆದಿದ್ದಾರೆ.

ನಗರ ಪ್ರದೇಶದ 8576 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 6459 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ 75.31 ಫಲಿತಾಂಶ ದೊರೆತಿದೆ. ಗ್ರಾಮೀಣ ಪ್ರದೇಶದ 5067 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 3598 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ 71.00 ಫಲಿತಾಂಶ ಸಿಕ್ಕಿದೆ.

ತಾಲೂಕುವಾರು ಫಲಿತಾಂಶ

ದೇವನಹಳ್ಳಿ ತಾಲೂಕಿನಲ್ಲಿ 3255 ವಿದ್ಯಾರ್ಥಿಗಳು ಹಾಜರಾಗಿದ್ದು 2550 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 78.34 ಫಲಿತಾಂಶ ಪಡೆದಿದ್ದಾರೆ.ದೊಡ್ಡಬಳ್ಳಾಪುರ 2561 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 70.08 ಫಲಿತಾಂಶ ಬಂದಿದೆ. ಹೊಸಕೋಟೆ 2646 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 72.99 ಫಲಿತಾಂಶ ಪಡೆದಿದ್ದಾರೆ. ನೆಲಮಂಗಲ ತಾಲೂಕಿನಲ್ಲಿ 3109 ವಿದ್ಯಾರ್ಥಿಗಳ ಪೈಕಿ 2300 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 73.97 ಫಲಿತಾಂಶ ಪಡೆದಿದ್ದಾರೆ.

ವಿದ್ಯಾರ್ಥಿ ಮಿತ್ರ ಸಹಕಾರ ಕಾರಣ:

625 ಪೂರ್ಣಾಂಕದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ದೊಡ್ಡಬಳ್ಳಾಪುರ ಟೌನ್ ಮೆಳೆಕೋಟೆ ಕ್ರಾಸ್‌ನಲ್ಲಿರುವ ಎಸ್‌ಜೆಸಿಆರ್ ಶಾಲೆಯ ಎ.ಸಿ.ರಂಜಿತಾ ಈ ಸಾಧನೆಗೆ ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿಮಿತ್ರ ಸಂಚಿಕೆ ಬಹಳ ಸಹಕಾರಿಯಾಯಿತು ಎಂದು ಪತ್ರಿಕೆಗೆ ಧನ್ಯವಾದ ತಿಳಿಸಿದ್ದಾರೆ. ವಿದ್ಯಾರ್ಥಿ ಮಿತ್ರದಲ್ಲಿ ಪ್ರಕಟವಾಗುವ ಕೀ ಉತ್ತರಗಳಿಂದ ಸಾಕಷ್ಟು ಸುಲಭವಾಗಿ ಕಲಿಯಲು ಸಹಕಾರಿಯಾಯಿತು ಪ್ರತಿನಿತ್ಯ ತಪ್ಪದೆ ವಿದ್ಯಾರ್ಥಿಮಿತ್ರ ಸಂಚಿಕೆ ಓದುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕೊಯಿರಾ ಪಂಚಾಯಿತಿ ಅರುವನಹಳ್ಳಿಯ ರೈತ ಕುಟುಂಬದ ಮೂರನೇ ಮಗಳಾದ ರಂಜಿತಾ 1ನೇ ತರಗತಿಯಿಂದ ಇದೇ ಶಾಲೆಯಲ್ಲಿ ಓದಿದವರು. ಪ್ರಾಥಮಿಕ ತರಗತಿಯಿಂದಲೂ ಓದಿನಲ್ಲಿ ಮುಂದಿದ್ದ ಈಕೆ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆ ಏರುವ ಕನಸು ಹೊತ್ತಿದ್ದಾರೆ. ಇಬ್ಬರು ಸಹೋದರಿಯರಲ್ಲಿ ಒಬ್ಬರು ಎಂಬಿಬಿಎಸ್ ಓದುತ್ತಿದ್ದರೆ ಮತ್ತೊಬ್ಬರು ಇಂಜಿನಿಯರಿಂಗ್‌ನಲ್ಲಿದ್ದಾರೆ. ವ್ಯವಸಾಯ ಹಾಗೂ ಹೈನುಗಾರಿಕೆಯನ್ನೇ ಅವಲಂಬಿಸಿರುವ ರೈತಾಪಿ ಕುಟುಂಬದಲ್ಲಿ ಮೂವರು ಹೆಣ್ಣುಮಕ್ಕಳ ಸಾಧನೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಂದೆ ಚಂದ್ರಶೇಕರ್ ರೈತರಾಗಿದ್ದು, ತಾಯಿ ಅನಿತಾ ಕುಟುಂಬ ನಿರ್ವಹಣೆ ಜತೆಗೆ ವ್ಯವಸಾಯದಲ್ಲೂ ತೊಡಗಿಸಿಕೊಂಡಿದ್ದಾರೆ. ಶಾಲೆಯಲ್ಲಿ ಪ್ರತಿ ತಿಂಗಳು ನಡೆಸುತ್ತಿದ್ದ ಕಿರು ಪರೀಕ್ಷೆಗಳು ಪರೀಕ್ಷಾ ಭಯವನ್ನು ದೂರ ಮಾಡಿತ್ತು. ತಂದೆ ತಾಯಿ ಹಾಗೂ ಶಾಲಾ ಶಿಕ್ಷಕರ ಸಹಕಾರ ಇಂಥ ಸಾಧನೆ ಕಾರಣ ಎನ್ನುತ್ತಾರೆ ರಂಜಿತಾ. ತಾಲೂಕಿನಲ್ಲೇ ಎಸ್‌ಜೆಸಿಆರ್ ಶಾಲೆ ದಿ ಬೆಸ್ಟ್ ಎನ್ನಬಹುದು. ಉತ್ತಮ ಶಿಕ್ಷಣ ಮಾರ್ಗದರ್ಶನಕ್ಕೆ ಈ ಶಾಲೆಗಿಂತ ಮತ್ತೊಂದಿಲ್ಲ ಎಂದು ಶಾಲೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಮಗ್ಗದ ಹುಡುಗಿ ಟಾಪರ್:

ಮಗ್ಗದ ಕೆಲಸ ಮಾಡುವ ಚಂದ್ರು ಹಾಗೂ ಮಾಲಾ ದಂಪತಿ ಪುತ್ರಿ ಸಿ.ಭಾವನಾ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ದೇವನಹಳ್ಳಿ ತಾಲೂಕು ವಿಜಯಪುರ ಟೌನ್‌ನಲ್ಲಿನ ನೀಲಗಿರೇಶ್ವರ ಶಾಲೆ ವಿದ್ಯಾರ್ಥಿನಿಯಾಗಿದ್ದು, ಶಾಲೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಯಾವುದೇ ಟ್ಯೂಷನ್ ಇಲ್ಲದೆ ಮನೆಯಲ್ಲಿಯೇ ಏಕಾಗ್ರತೆಯಿಂದ ಅಭ್ಯಾಸ ಮಾಡಿದ್ದ ಲವಾಗಿ ಈ ಲಿತಾಂಶ ಬಂದಿದೆ ಎನ್ನುತ್ತಾರೆ ಭಾವನಾ. ತಂದೆ-ತಾಯಿ ಹಾಗೂ ಶಾಲಾ ಶಿಕ್ಷಕರ ಸಹಕಾರವೇ ಕಾರಣ, ರಾಜ್ಯಕ್ಕೆ ಟಾರ್ ಆಗುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ ಆದರೆ ಉತ್ತಮ ಅಂಕ ಬರುತ್ತದೆ ಎಂಬ ನಂಬಿಕೆ ಇತ್ತು. ತರಗತಿ ಆರಂಭದಲ್ಲಿ ಓದಿಗೆ ಹೆಚ್ಚಿನ ಶ್ರಮ ಹಾಕುತ್ತಿರಲಿಲ್ಲ ಆದರೆ ಪರೀಕ್ಷಾ ದಿನಗಳು ಹತ್ತಿರವಾಗುತ್ತಿದ್ದಂತೆ ಶಿಕ್ಷಕರು ಹೆಚ್ಚು ಒತ್ತಾಸೆ ಮಾಡಿದರು. ಗಣಿತ ಹಾಗೂ ವಿಜ್ಞಾನ ವಿಷಯಗಳ ಕಡೆ ಹೆಚ್ಚು ಗಮನ ಕೊಡುವಂತೆ ತಿಳಿಸಿದ್ದರು. ಅವರ ಮಾರ್ಗದರ್ಶನ ಅನುಸರಿಸಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ ಎನ್ನುತ್ತಾರೆ ಭಾವನಾ. ಮಗಳಿಗೆ ಓದುವಂತೆ ಒತ್ತಡ ಹಾಕುತ್ತಿರಲಿಲ್ಲ. ರಾತ್ರಿ ವೇಳೆ ಓದುತ್ತಿದ್ದರೆ ಆರೋಗ್ಯ ಹಾಳಾಗುತ್ತದೆ ನಿದ್ರೆ ಮಾಡು ಎಂದು ಹೇಳುತ್ತಿದ್ದೆ. ಆದರೆ ಪಟ್ಟು ಬಿಡದೆ ಓದಿದ ಮಗಳು ಈ ಸಾಧನೆ ಮಾಡುವ ಮೂಲಕ ನಮಗೆಲ್ಲ ಸಂತಸ ತಂದಿದ್ದಾಳೆ ಎನ್ನುತ್ತಾರೆ ತಂದೆ ಚಂದ್ರು. ನಾವು ಮಗಳಿಗೆ ಹೆಚ್ಚಿನದೇನು ಕೊಡಲಿಲ್ಲ. ಆಕೆಯ ಸ್ವಯಂ ಶ್ರಮವೇ ಈ ಸಾಧನೆಗೆ ಕಾರಣ ಎನ್ನುತ್ತಾರೆ ತಾಯಿ ಮಾಲಾ.

ಶಾಲೆ ಕೀರ್ತಿ ಹೆಚ್ಚಿಸಿದ್ದಾರೆ: ನಮ್ಮ ಶಾಲೆಯಲ್ಲಿ 54 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 10 ಅತ್ಯುತ್ತಮ ದರ್ಜೆ, 27 ಪ್ರಥಮ ಹಾಗೂ 17 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗುವುದರೊಂದಿಗೆ ಶಾಲೆಗೆ 100 ಶೇ.ಫಲಿತಾಂಶ ಬಂದಿದೆ ಅದರಲ್ಲಿ ಭಾವನಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎನ್ನುತ್ತಾರೆ ಒಕ್ಕಲಿಗರ ಸಂದ ನೀಲಗಿರೇಶ್ವರ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಿ.ನಾರಾಯಣಸ್ವಾಮಿ

ಈ ಬಾರಿ ಜಿಲ್ಲೆಗೆ ಉತ್ತಮ ಲಿತಾಂಶ ಬಂದಿದೆ, ಇಬ್ಬರು ವಿದ್ಯಾರ್ಥಿನಿಯರು ಪೂರ್ಣಾಂಕದೊಂದಿಗೆ ತೇರ್ಗಡೆಯಾಗುವ ಮೂಲಕ ಜಿಲ್ಲೆಯ ಕೀರ್ತಿ ಬೆಳಗಿದ್ದಾರೆ. ಅದೇ ರೀತಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಈ ಬಾರಿ ಹೆಚ್ಚು ಅಂಕ ಗಳಿಸಿರುವುದು ಸ್ವಾಗತಾರ್ಹವಾಗಿದೆ. ಸೂಲಿಬೆಲೆ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿ ಮೋಹನ್ 623 ಅಂಕ ಪಡೆದಿದ್ದಾರೆ. ಅದೇ ರೀತಿ ಅನುದಾನ ರಹಿತ ಶಾಲೆಯ ಮಕ್ಕಳು 600 ಅಂಕಗಳನ್ನು ದಾಟಿದ್ದು ಉತ್ತಮ ಸಾಧನೆ ಮಾಡಿದ್ದಾರೆ. ಇವೆಲ್ಲ ಮಕ್ಕಳಿಗೂ ಭವಿಷ್ಯ ಉತ್ತಮವಾಗಿರಲಿ ಎಂದು ಶುಭಹಾರೈಸುತ್ತೇನೆ.

ಎ.ಬಿ.ಬಸವರಾಜು, ಜಿಲ್ಲಾಧಿಕಾರಿ ಬೆಂಗಳೂರು ಗ್ರಾಮಾಂತರ

ಪ್ರಥಮ ಸ್ಥಾನದ ನಿರೀಕ್ಷೆಯೊಂದಿಗೆ ಈ ಬಾರಿ ಸಾಕಷ್ಟು ತಾಲೀಮು ನಡೆಸಲಾಗಿತ್ತು, 9ನೇ ಸ್ಥಾನ ಪಡೆದಿದೆ, ವಿಶೇಷವಾಗಿ ಇಬ್ಬರು ವಿದ್ಯಾರ್ಥಿಗಳು ಪೂರ್ಣಾಂಕದೊಂದಿಗೆ ರಾಜ್ಯಕ್ಕೆ ಪ್ರಥಮಸ್ಥಾನ ಗಳಿಸಿದ್ದಾರೆ. ಪೂರ್ವ ಸಿದ್ದತಾ ಪರೀಕ್ಷೆಗಳು, ಪಾಲಕರು ಹಾಗೂ ವಿದ್ಯಾರ್ಥಿಗಳ ಸರಣಿ ಸಭೆ, ಶಿಕ್ಷಕರ ಹೆಚ್ಚಿನ ಶ್ರಮ, ವಿಶೇಷ ತರಗತಿಗಳು ಮತ್ತಿತರ ಪ್ರಯೋಗಗಳ ಮೂಲಕ ಈ ಸಾಧನೆ ಮಾಡಲು ಸಾಧ್ಯವಾಗಿದೆ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ಲ ಸಿಕ್ಕಿದ್ದು ಅವರ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ಶುಭಕೋರುತ್ತೇವೆ.

ಬೈಲಾಂಜನಪ್ಪ, ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆ