ಕಣಬರ್ಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಶಾಸಕ ಆಸ್ೀ ಸೇಠ ಬಹುಮಾನ ವಿತರಿಸಿದರು. ಬಿಇಒ ರವಿ ಭಜಂತ್ರಿ, ಮುಖ್ಯ ಶಿಕ್ಷಕಿ ರೇಖಾ.ಜಿ.ನಾಯಕ ಇತರರಿದ್ದರು. 
ಜಿಲ್ಲೆ

ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಬಹುಮಾನ ವಿತರಣೆ

ಶಂಕರ ಗೆಜ್ಜಿ

ಕಣಬರ್ಗಿ: ಬೆಳಗಾವಿ ನಗರದ ಹೊರವಲಯದ ಕಣಬರ್ಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ

ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಶಾಸಕ ಆಸ್ೀ ಸೇಠ ಬಹುಮಾನ ವಿತರಿಸಿದರು. 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.94ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಾದ ರಂಜನಾ ಪಾಶ್ಚಾಪುರ ಶೇ.97.44, ಸ್ನೇಹಾ ಸಂಪಗಾವಿ ಶೇ.95.04, ಶ್ರೇಯಾ ಎಮ್ಮೀಕರ ಶೇ.94.27 ಅವರಿಗೆ ತಲಾ 25 ಸಾವಿರ ರೂ. ನಗದು ಬಹುಮಾನ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಮಾತನಾಡಿದರು. ಮುಖ್ಯ ಶಿಕ್ಷಕಿ ರೇಖಾ.ಜಿ.ನಾಯಕ ಹಾಗೂ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಇದ್ದರು.