ಜಿಲ್ಲೆ

44ರ ಹರೆಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸ್!

ಮಂಗಳೂರು: 44ನೇ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಮಂಗಳೂರಿನ ಮಹಿಳೆಯೊಬ್ಬರು ಉತ್ತೀರ್ಣರಾಗಿದ್ದಾರೆ. ಹಂಪನಕಟ್ಟೆ ವಿವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಅಟೆಂಡರ್ ಆಗಿರುವ ಜಯಶ್ರೀ ಪರೀಕ್ಷೆ ಉತ್ತೀರ್ಣರಾಗಿರುವ ಮಹಿಳೆ. 243 ಅಂಕ ಗಳಿಸಿದ್ದು ಕನ್ನಡ 60, ಇಂಗ್ಲಿಷ್ 40, ವಿಜ್ಞಾನ 38 ಹಾಗೂ ಇತರ ವಿಷಯಗಳಲ್ಲಿ ತಲಾ 35 ಅಂಕ ಪಡೆದಿದ್ದಾರೆ. 5ನೇ ತರಗತಿವರೆಗೆ ಕಲಿತಿರುವ ಅವರು ನೇರವಾಗಿ 10ನೇ ತರಗತಿ ಬರೆದಿದ್ದಾರೆ.

ವೆಲೆನ್ಸಿಯಾ ಸೂಟರ್‌ಪೇಟೆಯಲ್ಲಿ ವಾಸವಾಗಿರುವ ಮಹಿಳೆಯ ಪತಿ ಪ್ರದೀಪ್ ಬ್ಯಾಂಕೊಂದರಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದಾರೆ.