ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ -1ರ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಪರೀಕ್ಷೆ ಬರೆದ 6,31,204 (73.40)ವಿದ್ಯಾರ್ಥಿಗಳು ತೇರ್ಗಡೆ ಹೊಂದಿದರೆ, 2,28,763 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ.
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಚಿಂತೆ ಮಾಡಬೇಡಿ. ಯಾಕೆಂದರೆ ಇನ್ನೂ ಉತ್ತಮ ಅಂಕಗಳನ್ನು ಗಳಿಸಲು ಪರೀಕ್ಷಾ ಮಂಡಳಿ ಅವಕಾಶ ಕಲ್ಪಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ದಿನಾಂಕ ನಿಗಧಿಯಾಗಿದ್ದು, ವೇಳಾಪಟ್ಟಿ ಪ್ರಕಟಿಸಿದೆ.
SSLC ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಆದರೆ ಫೇಲ್ ಆದ ವಿದ್ಯಾರ್ಥಿಗಳು ಟೆನ್ಶನ್ ಮಾಡುವ ಅವಶ್ಯಕೆಯಿಲ್ಲ. ಮರು ಪರೀಕ್ಷೆ ಬರೆಯುವ ಮೂಲಕ ಪಾಸ್ ಮಾಡಬಹುದಾಗಿದೆ.
ವಿದ್ಯಾರ್ಥಿಗಳಿಗೆ ಒಟ್ಟು ಮೂರು ಗಂಟೆ 15 ನಿಮಿಷಗಳ ಕಾಲವಕಾಶ ನೀಡಲಾಗಿದೆ. ಸರಿಯಾಗಿ ಪ್ರಶ್ನೆಗಳನ್ನು ಓದಿ, ಆರ್ಥೈಸಿಕೊಂಡು ಪರೀಕ್ಷೆ ಬರೆದು ಪಾಸ್ ಮಾಡಬಹುದಾಗಿದೆ.
ಪರೀಕ್ಷಾ ಅವಧಿ: ಬೆಳಗ್ಗೆ 10:15 ರಿಂದ ಮಧ್ಯಾಹ್ನ 01:15
7-6-2024- ಪ್ರಥಮ ಭಾಷೆ
8-6-2024- ತೃತೀಯ ಭಾಷೆ
10-6-2024- ಗಣಿತ, ಸಮಾಜ ಶಾಸ್ತ್ರ (ಕೋರ್ ಸಬ್ಜೆಕ್ಟ್)
11-6-2024- ಅರ್ಥ ಶಾಸ್ತ್ರ, ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
12-6-2024- ವಿಜ್ಞಾನ ಹಾಗೂ ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ
13-6-2024- ದ್ವಿತೀಯ ಭಾಷೆ (ಇಂಗ್ಲೀಷ್ ಹಾಗೂ ಕನ್ನಡ)
14-6-2024 – ಸಮಾಜ ವಿಜ್ಞಾನ