ತೇರದಾಳ ಪಟ್ಟಣದ ಸಿದ್ಧೇಶ್ವರ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ-2 ಪರೀಕ್ಷೆ ನಡೆಯಿತು. 
ಜಿಲ್ಲೆ

ಎಸ್‌ಎಸ್‌ಎಲ್‌ಸಿ-2 ಪರೀಕ್ಷೆ ಜಮಖಂಡಿ ತಾಲೂಕಿನಲ್ಲಿ 8 ಕೇಂದ್ರ

ದತ್ತಾತ್ರೇಯ ಪಿ ಕುಲಕರ್ಣಿ

ತೇರದಾಳ: ಎಸ್‌ಎಸ್‌ಎಲ್‌ಸಿ-2 ಪರೀಕ್ಷೆ ಸೋಮವಾರ ಪ್ರಾರಂಭವಾಗಿದ್ದು, ಪಟ್ಟಣದ ಸಿದ್ಧೇಶ್ವರ ಪ್ರೌಢಶಾಲೆ ಕೇಂದ್ರದಲ್ಲಿ ವಿವಿಧ ವಿಷಯಗಳ ಪರೀಕ್ಷೆ ಬರೆಯಲು 22 ಪ್ರೌಢಶಾಲೆಗಳ 308 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದಾರೆ.

ಸೋಮವಾರ ಪ್ರಥಮ ಭಾಷೆ ಪರೀಕ್ಷೆಗೆ 179 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. 145 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 34 ವಿದ್ಯಾರ್ಥಿಗಳು ಗೈರು ಉಳಿದಿದ್ದಾರೆಂದು ಮುಖ್ಯ ಅಧೀಕ್ಷಕ ಬಿ.ಬಿ. ಕುದರಿಮನಿ ತಿಳಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಪಾಲಕರಾಗಿ ಎಸ್.ಆರ್. ಹುಕ್ಕೇರಿ, ನಂದಕುಮಾರ ಶೇಡಶ್ಯಾಳ, ಸ್ಥಾನಿಕ ಜಾಗೃತದಳ ಅಧಿಕಾರಿ, ಮೊಬೈಲ್ ಸ್ವಾಧೀನಾಧಿಕಾರಿಯಾಗಿ ಎ.ಆರ್. ಮುಧೋಳ ಕಾರ್ಯನಿರ್ವಹಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ, ಎಸ್‌ಎಸ್‌ಎಲ್‌ಸಿ ನೋಡೆಲ್ ಅಧಿಕಾರಿ ಸಂಗಮೇಶ ವಿಜಯಪುರ ಸೇರಿ ವಿವಿಧ ಅಧಿಕಾರಿಗಳು ಜಮಖಂಡಿ ಅವಿಭಜಿತ ತಾಲೂಕಿನ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಅಖಂಡ ಜಮಖಂಡಿ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ಕ್ಕೆ 8 ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. ಯಾವುದೇ ನಕಲಿಗೆ ಅವಕಾಶ ಇಲ್ಲದೆ ಶಿಸ್ತು-ಶಾಂತಿಯಿಂದ ಪರೀಕ್ಷೆ ಆರಂಭವಾಗಿದೆ. -ಅಶೋಕ ಬಸಣ್ಣವರ, ಕ್ಷೇತ್ರ ಶಿಕ್ಷಣಾಧಿಕಾರಿ