ಜಿಲ್ಲೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಶಿಕ್ಷಣ ಪ್ರೇಮಿಗಳ ಆತಂಕ

ಸುನಿಲ್ ಪೊನ್ನೇಟಿ

ಮಡಿಕೇರಿ:

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಳೆದ ವರ್ಷ 4ನೇ ಸ್ಥಾನದಲ್ಲಿ ಇದ್ದ ಕೊಡಗು ಈ ಬಾರಿ ಫಲಿತಾಂಶ ಸುಧಾರಿಸಿಕೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ರಾಜ್ಯಕ್ಕೆ ಪ್ರಥಮ ಅಲ್ಲವಾದರೂ ಮೊದಲ ಮೂರು ಸ್ಥಾನಗಳ ಪೈಕಿ ಒಂದು ಸ್ಥಾನ ಪಡೆಯುವ ಬಗ್ಗೆ ಆಶಾಭಾವನೆ ಇತ್ತು. ಆದರೆ ಈಗ ಫಲಿತಾಂಶ ಪ್ರಕಟವಾಗಿದ್ದು. ಶೇ. 82.21ರಷ್ಟು ಸಾಧನೆ ಮಾಡುವ ಮೂಲಕ 5ನೇ ಸ್ಥಾನಕ್ಕೆ ಇಳಿದಿದ್ದು, ಶಿಕ್ಷಣ ಪ್ರೇಮಿಗಳಲ್ಲಿ ತೀವ್ರ ನಿರಾಸೆಗೆ ಕಾರಣವಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಕೊಡಗು ಉತ್ತಮ ಸಾಧನೆ ಮಾಡಲಿದೆ ಎಂದು ಸ್ಥಳೀಯರು ಇಟ್ಟುಕೊಂಡಿದ್ದ ನಿರೀಕ್ಷೆಗೆ ಕಾರಣವೂ ಇದೆ. ವರ್ಷಾರಂಭದಿAದಲೇ ಇದಕ್ಕಾಗಿ ಶಿಕ್ಷಣ ಇಲಾಖೆಯಲ್ಲಿ ಸಿದ್ಧತೆ ನಡೆದಿತ್ತು. ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಸಾಕಷ್ಟು ಪೂರ್ವ ತಯಾರಿಗಳನ್ನೂ ಮಾಡಿಕೊಳ್ಳಲಾಗಿತ್ತು. ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವುದಕ್ಕೆ ಸಂಬAಧಿಸಿದAತೆ ಶಿಕ್ಷಕರಿಗೂ ತರಬೇತಿ ಕೊಡಲಾಗಿತ್ತು.

ಅವಧಿಗೂ ಮೊದಲೇ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಪಠ್ಯಕ್ರಮವನ್ನು ಮುಗಿಸಲಾಗಿತ್ತು. ಸರ್ಕಾರಿ ಶಾಲೆಗಳಲ್ಲಂತೂ ವಿದ್ಯಾರ್ಥಿಗಳ ಮೇಲೆ ವ್ಯಯಕ್ತಿಕ ನಿಗಾ ಇಡಲಾಗಿತ್ತು. ರಾತ್ರಿ ತರಗತಿ, ವಿಶೇಷ ತರಗತಿ.. ಹೀಗೆ ಶಿಕ್ಷಣ ಇಲಾಖೆ ಮಾಡಿದ್ದ ಪ್ರಯತ್ನಗಳನ್ನು ಗಮನಿಸಿದರೆ ಕೊಡಗು ಮೊದಲ ಮೂರು ಸ್ಥಾನದೊಳಗೆ ಇರಬೇಕಾಗಿತ್ತು. ಆದರೆ ಹಾಗೆ ಆಗಲಿಲ್ಲ.

ಈ ಶೈಕ್ಷಣಿಕ ಸಾಲಿನಲ್ಲಿ ನಡೆಸಿದ್ದ ಪ್ರಯತ್ನಗಳಲ್ಲಿ ಏನೋ ಕೊರತೆಯ ಕಾರಣದಿಂದ ಫಲಿತಾಂಶ ಈ ರೀತಿಯಲ್ಲಿ ಬಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಶೈಕ್ಷಣಿಕ ಸಾಲಿನಲ್ಲಿ ಆ ಕೊರತೆಗೆ ಪರಿಹಾರೋಪಾಯ ಕಂಡುಕೊಳ್ಳುವುದರ ಜತೆಗೆ ಕೊಡಗು ಈ ಬಾರಿಯಾದರೂ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಸಾಧನೆ ಮಾಡಲಿ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ನಮ್ಮ ಉದ್ಧಾರ ನಮ್ಮಿಂದಲೇ ಎಂಬ ಆಲೋಚನೆ ವಿದ್ಯಾರ್ಥಿಗಳಿಗೆ ಇರಬೇಕು. ಕಠಿಣ ಪರಿಶ್ರಮ ಪಡಬೇಕು. ಕೆಲವೊಂದು ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಎಲ್ಲಾ ಶಾಲೆಗಳು ತೆಗೆದುಕೊಳ್ಳಬೇಕು. ಪೋಷಕರ ಸಹಕಾರವೂ ಶಾಲೆಗೆ ಇರಬೇಕು. ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಿದರೆ ಮುಗಿಯಿತು ನಮ್ಮ ಜವಾಬ್ದಾರಿ ಎಂದುಕೊಳ್ಳಬಾರದು.

ರಾಘವಿ ಜಗದೀಶ್, ಕನ್ನಡ ಉಪನ್ಯಾಸಕರು, ಪದವಿ ಪೂರ್ವ ಕಾಲೇಜು, ಆಲೂರು ಸಿದ್ದಾಪುರ

ಕೊಡಗು ಮೊದಲನೇ ಸ್ಥಾನದಲ್ಲಿ ಇರಬೇಕು ಎಂಬುದು ನಮ್ಮೆಲ್ಲರ ನಿರೀಕ್ಷೆ. ಆದರೆ ಅದು ಕಳೆದ ಸಾಲಿಗಿಂತ ಹಿನ್ನಡೆಯಾಗಿದೆ. ರಾತ್ರಿ ಹಗಲು ಎನ್ನದೆ ತರಗತಿ ನಡೆಸುವ ಮೂಲಕ ಕೆಲ ಶಾಲೆಗಳಲ್ಲಿ ಶೇ. 100 ಫಲಿತಾಂಶ ಬಂದಿದೆ. ಇದೆ ಮಾದರಿ ಎಲ್ಲಾ ಶಾಲೆಗಳಲ್ಲಿ ಮಾಡಬೇಕಿದೆ. ಕೇವಲ ತಮಗೆ ಕೊಟ್ಟ ಸಮಯದಲ್ಲಿ ಮಾತ್ರ ತರಗತಿ ತೆಗೆದುಕೊಳ್ಳದೆ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳಬೇಕಿದೆ. ಇದಕ್ಕೆ ಸಂಬAಧ ಪಟ್ಟ ಇಲಾಖೆ ಪ್ರೋತ್ಸಾಹ ನೀಡಬೇಕು.

ಗುಣರಾಜು, ಗ್ರಂಥಪಾಲಕಿ, ಹಲಸಿನ ಮರ ಶ್ರೀಮತಿ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜು, ಕೊಡ್ಲಿಪೇಟೆ

ಪ್ರತಿ ಶಾಲೆಯ ವಿದ್ಯಾರ್ಥಿಗಳೂ ಉತ್ತಮ ಅಂಕದೊAದಿಗೆ ಎಲ್ಲರೂ ಉತ್ತೀರ್ಣರಾಗಬೇಕು. ಇದಕ್ಕೆ ಬೇಕಾದ ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮವಾಗಿ ಪರಿಶ್ರಮ ಪಟ್ಟರೆ ಕೊಡಗು ಮುಂದಿನ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಶೈಕ್ಷಣಿಕ ವರ್ಷದ ಆರಂಭದಿAದಲೇ ಪ್ರಯತ್ನಪಡಬೇಕು.

ಕಿರಣ್, ಗ್ರಾ.ಪಂ. ಸದಸ್ಯ, ಮಾಲ್ದಾರೆ

ಈ ವರ್ಷದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಕೊಡಗು 5ನೇ ಸ್ಥಾನಕ್ಕೆ ಬರಲು ಮುಖ್ಯ ಕಾರಣವೆಂದರೆ ಶಾಲೆಗಳಲ್ಲಿ ಶಿಕ್ಷಕರ ಕೊರತೆ. ಕೆಲವು ಶಾಲೆಗಳಲ್ಲಿ ಪ್ರತಿ ವಿಷಯ ಶಿಕ್ಷಕರು ಇಲ್ಲದಿರುವುದು ಹಾಗೂ ಕೆಲವು ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ತಡವಾಗಿ ನೇಮಿಸುತ್ತಿರುವುದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪ್ರಭಾವ ಬೀರಿದೆ. ಈ ವರ್ಷವಾದರೂ ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳಲಿ

ಬಿ.ಎಸ್. ಭಾನುಪ್ರಕಾಶ್, ಬೇಟೋಳಿ ಗ್ರಾಮ, ವಿರಾಜಪೇಟೆ

ಎಸ್‌ಎಸ್‌ಎಲ್‌ಸಿಯಲ್ಲಿ ಫಲಿತಾಂಶ ಸುಧಾರಣೆ ಆಗಬೇಕಾದರೆ ಮೊದಲು ಸರ್ಕಾರಿ ಶಾಲೆಗೆ ಅವಶ್ಯಕತೆ ಇರುವ ಶಿಕ್ಷಕರನ್ನು ನೇಮಕ ಮಾಡಬೇಕು. ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಬಿದ್ದಿವೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಕಡಿಮೆಯಾಗುತ್ತಿದೆ.

ನ. ಲ. ವಿಜಯ, ಸಾಹಿತಿ, ಸೋಮವಾರಪೇಟೆ.

ಪರೀಕ್ಷೆಗಳ ಸಂದರ್ಭದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಹಬ್ಬ, ಹರಿಸೇವೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಶಾಲೆಗಳಿಗೆ ಗೈರು ಹಾಜರಾಗುವುದು, ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಕೌಶಲ್ಯ ಇಲ್ಲದಿರುವುದು, ಹೆಚ್ಚಿನ ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ತೋರಿಸದೆ ಇರುವುದು ಫಲಿತಾಂಶ ಇಳಿಮುಖ ಆಗಲು ಪ್ರಮುಖ ಕಾರಣವಾಗಿದೆ. ಸÀರ್ಕಾರ ಅಥವಾ ಇಲಾಖೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕೆಲವು ಹಕ್ಕುಗಳನ್ನು ಮಾತ್ರ ನೀಡಿದೆ ಆದರೆ ಅವರ ಕರ್ತವ್ಯಗಳನ್ನು ತಿಳಿಸದೆ ಇರುವುದು ಕೂಡ ಕಾರಣವಾಗಿದೆ.

ಸಿದ್ದರಾಜು ಬೆಳ್ಳಯ್ಯ, ಪ್ರಾಂಶುಪಾಲರು, ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜು, ಮದೆನಾಡು

ಪರೀಕ್ಷೆ ಸಮೀಪಿಸುತ್ತಿರುವ ದಿನಗಳಲ್ಲಿ ಪರೀಕ್ಷೆ ಎಂಬ ಜ್ವರ ಹತ್ತಿಸಿಕೊಳ್ಳುವ ಬದಲು, ಹೊಟ್ಟೆ ತುಂಬಾ ಊಟ ಮಾಡಿದರೆ ನಿದ್ರೆ ಬರುತ್ತದೆ ಎಂದು ಸರಿಯಾಗಿ ಊಟೋಪಹಾರ ಮಾಡದೇ, ನಿದ್ರೆ ಬಂದರೆ ಓದು ಮುಗಿಸಲು ಆಗುವುದಿಲ್ಲ್ಲ, ಎಲ್ಲಾ ಸಿಲೇಬಸ್ ಕವರ್ ಮಾಡುವುದಕ್ಕೆ ಆಗುವುದಿಲ್ಲ ಎಂದು ಪರಿತಪಿಸುವುದಕ್ಕಿಂತ ಶೈಕ್ಷಣಿಕ ವರ್ಷದ ಆರಂಭದಿAದಲೇ ಶ್ರಮವಹಿಸಿದರೆ ಉತ್ತಮ ಸಾಧನೆ ಕಷ್ಟವಲ್ಲ.

ಕೆ.ಎಸ್. ಮೂರ್ತಿ, ಅಧ್ಯಕ್ಷ, ಶರಣ ಸಾಹಿತ್ಯ ಪರಿಷತ್ತು, ಕೊಡಗು

ಹತ್ತನೇ ತರಗತಿ ಫಲಿತಾಂಶ ಸುಧಾರಣೆಗೆ ಮಕ್ಕಳಿಗೆ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸಬೇಕು. ಶಿಕ್ಷಕರಿಲ್ಲದೆ ಆಯಾ ವಿಷಯಗಳಲ್ಲಿ ಅಂಕಗಳನ್ನು ಗಳಿಸಲು ಸಾಧ್ಯವಿಲ್ಲ. ಸರ್ಕಾರಿ ಶಾಲೆಯ ಮಕ್ಕಳಿಗೆ ಪರೀಕ್ಷಾ ಸಮಯದಲ್ಲಿ ಆತ್ಮವಿಶ್ವಾಸ ತುಂಬಬೇಕು. ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಸಿಗುವಂತೆ ಜಿಲ್ಲಾಡಳಿತ ಮಾಡಬೇಕು. ಶಾಲೆಗಳಲ್ಲಿ ಹೆಚ್ಚು ಹೆಚ್ಚು ಆಂತರಿಕ ಪರೀಕ್ಷೆಗಳನ್ನು ಮಾಡಬೇಕು.

ಪಾರ್ವತಿ ವಿಜೇತ್, ಗೃಹಿಣಿ, ಸೋಮವಾರಪೇಟೆ

ಈ ಬಾರಿ ಗ್ರೇಸ್ ಮಾರ್ಕ್ ಕೊಡದ ಕಾರಣ ಕೊಡಗಿನಲ್ಲಿ ಫಲಿತಾಂಶ ಕಡಿಮೆ ಆಗಿದೆ. ಒಂದು ವೇಳೆ ಗ್ರೇಸ್ ಮಾರ್ಕ್ ಕೊಟ್ಟಿದ್ದರೆ ಫಲಿತಾಂಶ ಮೇಲಕ್ಕೆ ಏರುತ್ತಿತ್ತು. ಇನ್ನೂ ಉತ್ತಮ ಫಲಿತಾಂಶಕ್ಕಾಗಿ ಮುಂದಿನ ಶೈಕ್ಷಣಿಕ ಸಾಲಿನಲ್ಲೂ ಈ ಹಿಂದಿನAತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಹಿನ್ನಡೆ ಆಗಿರುವ ಅಂಶಗಳ ಬಗ್ಗೆ ಗಮನಹರಿಸಿ ಮುಂದಿನ ಬಾರಿ ರಾಜ್ಯಕ್ಕೆ ನಂಬರ್ ಒನ್ ಆಗುವುದರತ್ತ ಗಮನ ಕೇಂದ್ರೀಕರಿಸಲಾಗುವುದು.

ರAಗಧಾಮಪ್ಪ, ಉಪನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ