ಹುಬ್ಬಳ್ಳಿ: ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಇವರನ್ನು ಖ್ಯಾತ ಉದ್ಯಮಿ ಬ್ರಿಜ ಮೋಹನಸ್ವಾಮಿಸಾ ಖೋಡೆ ಇವರ ನೇತೃತ್ವದಲ್ಲಿ ಎಬಿಎಸ್ಎಸ್ಕೆ ಸಮಾಜದ ಪರವಾಗಿ ಬೆಂಗಳೂರಿನಲ್ಲಿ ಭೇಟಿಯಾಗಿ ಸನ್ಮಾನಿಸಲಾಯಿತು.
ಬಾಗಲಕೋಟೆಯ ನಾರಾಯಣಸಾ ಭಾಂಡಗೆ ಅವರನ್ನು ರಾಜ್ಯಸಭೆ ಚುನಾವಣೆಗೆ ಅಭ್ಯಥಿರ್ಯಾಗಿಸಿದ ಹಿನ್ನೆಲೆಯಲ್ಲಿ ಅಭಿನಂದಿಸಲಾಯಿತು.
ಎಬಿಎಸ್ಎಸ್ಕೆ ಸಮಾಜದ ಸದಸ್ಯರಾದ ಅಶೋಕ ಹಬೀಬ, ಹುಬ್ಬಳ್ಳಿ ಧಾರವಾಡ ಎಸ್ಎಸ್ಕೆ ಸಮಾಜದ ಮಾಜಿ ಮುಖ್ಯ ಧರ್ಮದಶಿರ್ ನೀಲಕಂಠಸಾ ಜಡಿ, ಭಾಸ್ಕರ ಜಿತೂರಿ, ವರ್ಲ್ಡ್ ಸ್ಕ್ವೇರ್ ಸಂಸ್ಥೆಯ ಮಾಲೀಕ ಯೋಗೇಶ್ ಹಬೀಬ ಇತರರು ಉಪಸ್ಥಿತರಿದ್ದರು.