ಜಿಲ್ಲೆ

ಎಸ್‌ಎಸ್‌ಕೆ ಸಮಾಜದ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Gadag - Shivanand Hiremath

ವಿದ್ಯಾರ್ಥಿಗಳ ಜೀವನದಲ್ಲಿ ಗುರುಗಳ ಪಾತ್ರ ಮಹತ್ವದ್ದಾಗಿದೆ : ಡಿ.ಎಚ್. ಕಬಾಡಿ

ಗದಗ : ನಗರದ ಮಕಾನಗಲ್ಲಿಯಲ್ಲಿರುವ ಎಸ್‌ಎಸ್‌ಕೆ ಜಗದಂಬಾ ಶಿಕ್ಷಣ ಸಂಸ್ಥೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನಾಚರಣೆ ಅಂಗವಾಗಿ ನಿವೃತ್ತ ಮುಖ್ಯೋಪಾಧ್ಯಯರಾದ ಡಿ.ಎಚ್.ಕಬಾಡಿ ಹಾಗೂ ಸಾಹಿತಿ ಶ್ರೀಮತಿ ಪದ್ಮಾ ಕಬಾಡಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ನಿವೃತ್ತ ಮುಖ್ಯೋಪಾದ್ಯಯರಾದ ಡಿ.ಎಚ್.ಕಬಾಡಿ ಅವರು ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಮುಂದೆ ಗುರಿ ಇರಬೇಕು ಹಿಂದೆ ಗುರು ಇದ್ದರೆ ಮಾತ್ರ ಸಾಧನೆ ಮಾಡಲು ಸಾದ್ಯ, ಗುರುಗಳು ವಿದ್ಯಾರ್ಥಿಗಳ ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿತ್ತಾರೆ. ತಂದೆ-ತಾಯಿ ನಮಗೆ ಜೀವ ನೀಡಿದರೆ ಗುರುಗಳು ನಮಗೆ ಜೀವನದ ಪಾಠವನ್ನು ಕಲಿಸುತ್ತಾರೆ. ಅಂತಹ ಗುರುಗಳಿಗೆ ನಾವುಗಳು ಸದಾ ಚಿರಋಣಿಯಾಗಿರಬೇಕು ನಾನು ಕೂಡಾ ಶಿಕ್ಷಕನಾಗಿ ಸೇವೆ ಸಲ್ಲಿಸಿರುವುದು ನನ್ನ ಪೂರ್ವಜನ್ಮದ ಪುಣ್ಯವೆಂದು ಭಾವಿಸುತ್ತೆನೆ ಎಂದು ಹೇಳಿದರು.
ಅಕ್ಷರನಾದ ಬಸವಶ್ರೀರತ್ನ ಪ್ರಶಸ್ತಿ ಪುರಸ್ಕೃತೆ, ಸಾಹಿತಿ ಶ್ರೀಮತಿ ಪದ್ಮಾ ಕಬಾಡಿ ಅವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಂಸ್ಕಾರ ಕಲಿಯಬೇಕು. ಗುರು-ಹಿರಿಯರಿಗೆ ಗೌರವ ಕೊಡಬೇಕು. ಮಕ್ಕಳು ಮೂಬೈಲ್ ಬಳಿಕೆ ಕಡಿಮೆ ಮಾಡಿ ಗುರುಗಳು ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕು ಅಂದಾಗ ಮಾತ್ರ ಆದರ್ಶ ವ್ಯಕ್ತಿಯಾಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಪಂಚ ಕಮೀಟಿಯ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ ಅವರು ಮಾತನಾಡಿ, ಜೀವನದಲ್ಲಿ ಬದುಕಲು ಕಲಿಸಿದ ಗುರುಗಳನ್ನು ಎಂದು ಮರೆಯಬಾರದು. ವಿದ್ಯಾರ್ಥಿಗಳು ತಾವು ಕಲಿತ ಶಾಲೆ ಹಾಗೂ ಕಲಿಸಿದ ಗುರುಗಳಿಗೆ ಕೀರ್ತಿ ತರುವಂತಹ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಕೂಲ್ ಕಮೀಟಿ ವೈಸ್ ಚೇರಮನ್ ವಿಶ್ವನಾಥಸಾ ಖಟವಟೆ, ಮಾರುತಿ ಪವಾರ, ಪರಶುರಾಮಸಾ ಬದಿ, ವಿನೋಧ ಬಾಂಡಗೆ, ಮಹಿಳಾ ಮಂಡಳದ ಅಧ್ಯಕ್ಷೆ ಉಮಾ ಬೇವಿನಕಟ್ಟಿ, ಸ್ನೇಹಲತಾ ಕಬಾಡಿ, ಶಾಂತಾಬಾಯಿ ಬಾಕಳೆ, ವಂದನಾ ಶಿದ್ಲಿಂಗ, ವಿಶಾಲಾಕ್ಷಿ ಕಬಾಡಿ, ಕಸ್ತೂರಿಬಾಯಿ ಬಾಂಡಗೆ ಹಾಗೂ ಶಿಕ್ಷಕರು ಮತ್ತು ಶಾಲೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಶ್ರೀಕಾಂತ ಬಾಕಳೆ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಆರ್.ಡಿ. ಬಸವಾ ಸ್ವಾಗತಿಸಿದರು. ಶ್ರೀಮತಿ ಎಸ್. ಎಸ್. ಅಂಗಡಿ ನಿರೂಪಿಸಿದರು.