ಜಿಲ್ಲೆ

ಎಸ್​.ಎಸ್​.ಕೆ ಸಮಾಜದಿಂದ ಯಶಸ್ವಿ ನೇತ್ರ ತಪಾಸಣಾ ಶಿಬಿರ

Gadag - Shivanand Hiremath

ಗದಗ: ನಗರದ ಸಮೀಪದ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಲಕ್ಷ$್ಮಣಸಾ ಸಭಾಗೃಹದಲ್ಲಿ ಎಸ್​ಎಸ್​ಕೆ ಸಮಾಜದ ವತಿಯಿಂದ ಉಚಿತ ನೇತ್ರ ತಪಾಸಣಾ ಹಾಗೂ ಉಚಿತ ಕನ್ನಡಕ ವಿತರಿಸಲಾಯಿತು.
ಶಿಬಿರದಲ್ಲಿ 250 ಕ್ಕೂ ಹೆಚ್ಚು ರೋಗಿಗಳಿಗೆ ನೇತ್ರ ತಪಾಸಣೆ ಮಾಡಲಾಯಿತು. 21 ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. 102 ಜನರಿಗೆ ಕನ್ನಡಕ ವಿತರಿಸಲಾಯಿತು. ಇನ್ನೂಳಿದವರಿಗೆ ಐಸಿಟಿಸಿ, ಎಚ್​ಬಿಸಿಜಿ, ಬಿಪಿ ಹಾಗೂ ಸಕ್ಕರೆ ಖಾಯಿಲೆ ಸೇರಿದಂತೆ ಇತರೆ ಪರೀೆಗಳನ್ನು ಮಾಡಲಾಯಿತು.
ಎಸ್​ಎಸ್​ಕೆ ಸಮಾಜದ ವಿನೋದ ಶಿದ್ಲಿಂಗ ಮಾತನಾಡಿ, ಮಣ್ಣಿನಲ್ಲಿ ಮಣ್ಣಾಗುವ ಮುನ್ನ ನೇತ್ರಗಳನ್ನು ದಾನ ಮಾಡಿ ಇನ್ನೊಬ್ಬರ ಬಾಳಿನಲ್ಲಿ ಬೆಳಕಾಗಬೇಕು. ಅದೇರೀತಿ ರಕ್ತದಾನ ಮಾಡಬೇಕು. ಇನ್ನೊಬ್ಬರಿಗೆ ಜೀವದಾನ ಮಾಡಬೇಕು. ದೇವರು ನೀಡಿದ ಜನ್ಮವನ್ನು ಸಾರ್ಥಕ ಪಡೆಸಿಕೊಳ್ಳಬೇಕು ಎಂದರು.
ಅಧ್ಯತೆ ವಹಿಸಿದ್ದ ಎಸ್​ಎಸ್​ಕೆ ಸಮಾಜದ ಮಹಿಳಾ ಮಂಡಳದ ಅಧ್ಯೆ ಉಮಾ ಬೇವಿನಕಟ್ಟಿ ಮಾತನಾಡಿ, ಕಣ್ಣುಗಳಿಲ್ಲದೇ ಈ ಜಗತ್ತನ್ನು ನೋಡಲು ಸಾದ್ಯವಿಲ್ಲ. ಅಂತಹ ಜಗತ್ತನ್ನು ನೋಡಲು ನಾವುಗಳು ಇನ್ನೊಬ್ಬರಿಗೆ ಕಣ್ಣಾಗಬೇಕು ಮತ್ತು ಜಗತ್ತಿನಲ್ಲಿ ಕೃತಕವಾಗಿ ರಕ್ತವನ್ನು ತಯಾರು ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಾವುಗಳು ಆರೋಗ್ಯವಂತರಾಗಲು ಮತ್ತು ಇನ್ನೊಬ್ಬರಿಗೆ ಜೀವದಾನ ಮಾಡಲು ರಕ್ತದಾನ ಮಾಡಬೇಕು ಎಂದು ಹೇಳಿದರು.
ಮಹಿಳಾ ಮಂಡಳದ ಉಪಾಧ್ಯೆ ಸ್ನೇಹಲತಾ ಕಬಾಡಿ ಮಾತನಾಡಿ, ಎಸ್​ಎಸ್​ಕೆ ಸಮಾಜವು ಹೆಚ್ಚು ಸಂಟಿತರಾಗಿ ಇಂತಹ ಸಮಾಜಸೇವೆಗಳನ್ನು ಮಾಡಲು ಮುಂದೆ ಬರಬೇಕು ಎಂದು ಹೇಳಿದರು.
ಡಾ. ವರುಣ, ಡಾ. ಅಟಲ್​, ನೇತ್ರ ಸಹಾಯಕ ಅಧಿಕಾರಿ ಮಂಜುನಾಥ ದೊಡ್ಡಮನಿ, ಪರಶುರಾಮಸಾ ಬದಿ, ನಾಗೇಶ ಖೋಡೆ, ರೇಖಾ ಬೇವಿನಕಟ್ಟಿ, ಗೀತಾ ಹಬೀಬ, ಕಸ್ತೂರಿಬಾಯಿ ಭಾಂಡಗೆ, ಸುನಂದಾ ಹಬೀಬ, ಲಲಿತಾಬಾಯಿ ಬಾಕಳೆ, ಸರೋಜಾಬಾಯಿ ಟಿಕಣದಾರ, ರೇಣುಕಾಬಾಯಿ ಕಲಬುಗಿರ್, ರತ್ನಾಬಾಯಿ ಹಬೀಬ ಇತರರು ಇದ್ದರು.