ಜಿಲ್ಲೆ

ಎಸ್ಎಸ್ ಕೆ ಸಮಾಜ ಸಮಾವೇಶ

Dharwada - Basavaraj Idli

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರ ಬೆಂಬಲಾರ್ಥವಾಗಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ (ಎಸ್ಎಸ್ಕೆ) ಸಮಾವೇಶವನ್ನು ಏ. 11ರಂದು ಬೆಳಗ್ಗೆ 11ಕ್ಕೆ ನಗರದ ಗೋಕುಲ ರಸ್ತೆ ಕ್ಯೂಬಿಕ್ಸ್ ಹೋಟೆಲ್ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಅಶೋಕ ಕಾಟವೆ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಾ ಸಿಎಂ ಪ್ರಮೋದ ಸಾವಂತ, ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ, ಡಾ. ಶಶಿಕುಮಾರ ಮೆಹರವಾಡೆ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ ಇತರರು ಪಾಲ್ಗೊಳ್ಳುವರು ಎಂದರು.

ಸಮಾಜದ ಹೆಚ್ಚಿನ ಜನರು ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುತ್ತ ಬಂದಿದ್ದೇವೆ. ಇದೀಗ ಜೋಶಿ ಅವರಿಗೆ ಬೆಂಬಲ ಸೂಚಿಸಿ ಸಮಾಜದ ಒಗ್ಗಟ್ಟು ಪ್ರದಶಿರ್ಸಲು ಸಮಾವೇಶ ಏರ್ಪಡಿಸಲಾಗಿದೆ ಎಂದರು.

ಹುಡಾ ಮಾಜಿ ಅಧ್ಯಕ್ಷ ಬಾಳು ಮಗಜಿಕೊಂಡಿ ಮಾತನಾಡಿ, ಎಸ್ಎಸ್ಕೆ ಸಮಾಜದ ಸಾಧಕ ಯುವತಿಯೊಬ್ಬಳಿಗೆ ಅಗೌರವ ಆಗಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಗೌರವ ತರುವ ಕೆಲಸ ಮಾಡುತ್ತೇವೆ ಎಂದು ಉತ್ತರಿಸಿದರು.

ಭಾಸ್ಕರ ಜಿತೂರಿ, ಗೋಪಾಲ ಬದ್ದಿ, ಇತರರು ಗೋಷ್ಠಿಯಲ್ಲಿದ್ದರು.