ಜಿಲ್ಲೆ

ನೂರಾರು ಯುವಕರಿಗೆ ಉದ್ಯೋಗ ನೀಡಿದೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಎಸ್​ಎಸ್​ಕೆ ಸಮಾಜದವರು ನೌಕರಿಗಾಗಿ ಆಸೆ ಪಟ್ಟವರಲ್ಲ. ಸ್ವಯಂ ಉದ್ಯೋಗದಿಂದ ತಮ್ಮನ್ನು ಗುರುತಿಸಿಕೊಂಡು ನೂರಾರು ಯುವಕರಿಗೆ ಉದ್ಯೋಗ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.

ನಗರದ ಆರ್.ಎನ್. ಶೆಟ್ಟಿ ಮುಖ್ಯ ರಸ್ತೆಯಲ್ಲಿರುವ ಸನ್ಮಾನ ಕಾಲನಿಯಲ್ಲಿ ಎಸ್​ಎಸ್​ಕೆ ಸಣ್ಣ ಕೈಗಾರಿಕೆಗಳ ಸಂಘದ ಸ್ವಂತ ಕಟ್ಟಡ ನಿರ್ವಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಎಸ್​ಎಸ್​ಕೆ ಸಮಾಜದವರು ಧಾರವಾಡ ಜಿಲ್ಲೆಯಲ್ಲಿ ಇಂಜಿನಿಯರಿಂಗ್, ಫ್ಯಾಬ್ರಿಕೇಶನ್, ವಾಲ್ವ್ ಮೇಕಿಂಗ್, ಇತ್ಯಾದಿ 200ಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳನ್ನು ನಡೆಸುತ್ತಿರುವುದು ಶ್ಲಾಘನೀಯವಾದುದು ಎಂದರು.

ನಾನು ಬೆಳಗಾವಿ ಸಂಸದನಾದರೂ ಇಲ್ಲಿಯ ಎಸ್​ಎಸ್​ಕೆ ಸಮಾಜ ಹಾಗೂ ಎಸ್​ಎಸ್​ಕೆ ಸಣ್ಣ ಕೈಗಾರಿಕೆಗಳ ಸಂಘದ ಚಟುವಟಿಕೆಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಉದ್ಯಮಿ ನಾರಾಯಣ ನಿರಂಜನ, ಸಂಘದ ಕಾರ್ಯದರ್ಶಿ ಸಂತೋಷ ಕಾಟವೆ, ಪದಾಧಿಕಾರಿಗಳಾದ ಕೃಷ್ಣಾಸಾ ಮಿಸ್ಕಿನ್, ಯಲ್ಲಪ್ಪ ರಂಗರೇಜಾ, ಶ್ರೀಕಾಂತ ಕಬಾಡಿ, ಅಮೃತ ಹಬೀಬ, ಶೇಷಗಿರಿ ನಾಕೋಡ, ಮಹದೇವ ಸೋಳಂಕಿ, ಇತರರು ಇದ್ದರು. ಎ.ಟಿ. ಪವಾರ ಅಧ್ಯಕ್ಷತೆ ವಹಿಸಿದ್ದರು.