ಜಿಲ್ಲೆ

ಸೂರ್ಯ ನಮಸ್ಕಾರ ಮಾಡಿ ಗಮನ ಸೆಳೆದ ಮಕ್ಕಳು

ಎ. ಆರ್. ರಘುರಾಮ

ಶನಿವಾರಸಂತೆ: ಮುಳ್ಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ‘ ಒಂದು ಭೂಮಿ ಒಂದು ಆರೋಗ್ಯ’ ಪರಿಕಲ್ಪನೆಯಲ್ಲಿ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ಆಲೂರು ಸಿದ್ದಾಪುರ ವ್ಯಾಪ್ತಿಯ ಆಯುಷ್ಮಾನ್ ಆರೋಗ್ಯ ಮಂದಿರದ ಸಮುದಾಯ ಆರೋಗ್ಯ ಅಧಿಕಾರಿ ಕೆ.ಆರ್. ಗಣೇಶ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಓಂಕಾರ, ಶಾಂತಿ ಮಂತ್ರ, ಧ್ಯಾನ ಹೇಳಿಕೊಟ್ಟರು. ಮಕ್ಕಳು ಸೂರ್ಯ ನಮಸ್ಕಾರದ ವಿವಿಧ ಸರಳ ಆಸನಗಳನ್ನು ಮಾಡಿ ಗಮನ ಸೆಳೆದರು. ಮುಖ್ಯಶಿಕ್ಷಕ ಸತೀಶ ಮಾತನಾಡಿ, ಒತ್ತಡದ ಜೀವನ ನಿರ್ವಹಿಸಬೇಕಾದ ಸಂದರ್ಭದಲ್ಲೂ ಆನಂದಮಯವಾಗಿ ಜೀವಿಸಲು ಯೋಗ ಮತ್ತು ಧ್ಯಾನಗಳು ಸಹಕಾರಿಯಾಗಿದೆ ಎಂದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಜರಿದ್ದರು.