ಜಿಲ್ಲೆ

ಸೃಜನ್ ಕೆ.ಪಿ.ಪಲ್ಲತ್ತಾರುಗೆ ಪ್ರಥಮ ರ‌್ಯಾಂಕ್: ಹಿಂದಿ ಒಲಿಂಪಿಯಾಡ್ ಪರೀಕ್ಷೆ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ರಾಷ್ಟ್ರೀಯ ಸಿಎಸ್‌ಸಿ ಅಕಾಡೆಮಿ ಒಲಿಂಪಿಯಾಡ್ ನಡೆಸುವ ಸಿಎಸ್‌ಸಿ ಹಿಂದಿ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಒಳಮೊಗ್ರು ಗ್ರಾಮದ ಪಲ್ಲತ್ತಾರು ನಿವಾಸಿ ಸೃಜನ್ ಕೆ.ಪಿ. ರಾಜ್ಯಮಟ್ಟದಲ್ಲಿ ಪ್ರಥಮ ರ‌್ಯಾಂಕ್ ಪಡೆದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಆನ್‌ಲೈನ್ ಮೂಲಕ ನಡೆದ ಪರೀಕ್ಷೆಯಲ್ಲಿ ರಾಜ್ಯದ ಇಬ್ಬರು ಪ್ರಥಮ ರ‌್ಯಾಂಕ್ ಪಡೆದುಕೊಂಡಿದ್ದು, ಅದರಲ್ಲಿ ದ.ಕ. ಜಿಲ್ಲೆಯಿಂದ ಸೃಜನ್ ಕೆ.ಪಿ. ಕೂಡ ಒಬ್ಬರಾಗಿದ್ದಾರೆ. ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮತ್ತು ಉದ್ಯಮಿ ಪ್ರವೀಣ್ ಪಲ್ಲತ್ತಾರು ದಂಪತಿ ಪುತ್ರನಾದ ಸೃಜನ್, ಪುತ್ತೂರಿನ ತೆಂಕಿಲದ ನರೇಂದ್ರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ.