SRP's move is exemplary. 
ಜಿಲ್ಲೆ

ಎಸ್‌ಆರ್‌ಪಿ ನಡೆ ಅನುಕರಣೀಯ

Vijayapura - Desk - Doddanagouda Gudihindin

ಬೀಳಗಿ : ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ತತ್ವದಡಿಯಲ್ಲಿ ಸಾಗುತ್ತಿರುವ ಮಾಜಿ ಸಚಿವ ಎಸ್.ಆರ್. ಪಾಟೀಲರು ಉತ್ತರ ಕರ್ನಾಟಕದ ಹಾಗೂ ಮುಳುಗಡೆ ಸಂತ್ರಸ್ತರ ಬದುಕಿಗೆ ಅಂದು ಬೀಳಗಿ ಪಟ್ಟಣದಲ್ಲಿ ಸಹಕಾರಿ ಕ್ಷೇತ್ರದ ಬ್ಯಾಂಕನ್ನು ತೆರೆದು ಇಂದು ಸಾವಿರಾರು ರೈತರಿಗೆ ಆರ್ಥಿಕವಾಗಿ ಸಹಾಯ ನೀಡುತ್ತಿರುವ ಧೀಮಂತ ನಾಯಕ ಎಂದು ವಿಧಾನ ಪರಿಷತ್ ಸದಸ್ಯ ಎಚ್.ಆರ್. ನಿರಾಣಿ ಹೇಳಿದರು.

ಸ್ಥಳೀಯ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ರಜತ ಮಹೋತ್ಸವ-2025ರ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಪುರುಷರ ಹಾಗೂ ಮಹಿಳೆಯರ ರಾಷ್ಟ್ರಮಟ್ಟದ ಕಬಡ್ಡಿ ವೈಭವ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಎಸ್.ಆರ್. ಪಾಟೀಲರು ಬಾಡಗಂಡಿಯಲ್ಲಿ ಶಿಕ್ಷಣ ಕ್ರಾಂತಿ ಮಾಡಿದ್ದಾರೆ. ಸಹಕಾರಿ ಬ್ಯಾಂಕ್, ಸಕ್ಕರೆ ಕಾರ್ಖಾನೆ, ಮೆಡಿಕಲ್ ಕಾಲೇಜು ಆರಂಭಿಸಿ ಬಾಡಗಂಡಿ ಮತ್ತು ಬೀಳಗಿಯ ಹೆಸರು ಇತಿಹಾಸದ ಪುಟದಲ್ಲಿ ಸೇರುವಂತೆ ಮಾಡಿದ್ದಾರೆ. ಎಸ್.ಆರ್. ಪಾಟೀಲರ ಸಾಮಾಜಿಕ ನಡೆ ಅನುಕರಣೀಯ ಎಂದು ಬಣ್ಣಿಸಿದರು.

ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಸ್.ಆರ್. ಪಾಟೀಲ ಕಾರ್ಯಕ್ರಮದ ಅಧ್ಯಕ್ಷವಹಿಸಿದ್ದರು. ಎಸ್.ಆರ್. ಪಾಟೀಲ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಎನ್. ಪಾಟೀಲ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಸ್.ಟಿ. ಪಾಟೀಲ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಸತ್ಯಪ್ಪ ಮೇಲ್ನಾಡ, ಜಿಲ್ಲಾ ನೋಂದಣಾಧಿಕಾರಿ ಎಸ್.ಜಿ. ನ್ಯಾಮಗೌಡ, ಸಿಪಿಐ ಎಚ್.ಬಿ. ಸಣ್ಣಮನಿ, ಸಾಯಿ ಅಗ್ರೋ ಮಾಲಿಕ ಎಸ್.ಎಸ್. ರಂಗನಗೌಡರ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಲ್.ಬಿ. ಕುರ್ತಕೋಟಿ, ನಿರ್ದೇಶಕ ಎಂ.ಎನ್. ಕೆಂಪಲಿಂಗನ್ನವರ, ಕೆ.ಎಸ್. ಪತ್ರಿ, ರಾಜೇಂದ್ರ, ಉಪ ಪ್ರಧಾನ ವ್ಯವಸ್ಥಾಪಕ ಜಿ.ಎಸ್. ಬನಹಟ್ಟಿ, ಎಚ್.ಎ. ಕೊಪ್ಪಳ, ಎ.ಎಚ್. ಬೀಳಗಿ, ದೊಡ್ಡಣ್ಣ ದೇಸಾಯಿ, ವೆಂಕನಗೌಡ ಪಾಟೀಲ, ಉಸಮಾನ್ ಪಟೇಲ್ ಇದ್ದರು.