ಜಿಲ್ಲೆ

ನಾಲ್ವರು ಮಹಿಳೆಯರ ರಕ್ಷಣೆ * ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ

ಎ. ಆರ್. ರಘುರಾಮ

ಶ್ರೀರಂಗಪಟ್ಟಣ : ಪಟ್ಟಣದ ಪ್ರತ್ಯೇಕ ವಸತಿಗೃಹಗಳಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿದ ಪೊಲೀಸರು ನಾಲ್ವರು ಮಹಿಳೆಯರನ್ನು ರಕ್ಷಣೆ ಮಾಡಿ, ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪಟ್ಟಣದ ಮೈಸೂರು-ಬೆಂಗಳೂರು ಹಳೆಯ ರಾಷ್ಟ್ರೀಯ ಹೆದ್ದಾರಿ ಬದಿಯ ಎಚ್-3 ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ಮಂಗಳವಾರ ದಾಳಿ ನಡೆಸಿದ ಪೊಲೀಸರು, ಆರೋಪಿ ಶಶಾಂಕ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಒಬ್ಬ ಮಹಿಳೆಯನ್ನು ರಕ್ಷಿಸಿದ್ದಾರೆ. ಗಂಜಾಂ ರಸ್ತೆಯ ಲಾಡ್ಜ್ ಒಂದರ ಮೇಲೂ ದಾಳಿ ನಡೆಸಿರುವ ಟೌನ್ ಪೊಲೀಸರು, ಅಲ್ಲಿಯೂ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಉಮೇಶ್ ಮತ್ತು ಅರುಣ್ ಎಂಬ ಆರೋಪಿಗಳು ಸೇರಿ ಒಟ್ಟು ಮೂವರನ್ನು ನ್ಯಾಯಾಂಗ ಬಂಧನದ ವಶಕ್ಕೆ ನೀಡಿದ್ದಾರೆ.