ಮಸ್ಕಿ ತುಂಗಭದ್ರಾ ಕಾಲುವೆ ಬಳಿ ಶಿಗ್ಮಾ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷೆ ಪುಷ್ಪಾ ಬಿಜ್ಜಳ, ಉಪಾಧ್ಯಕ್ಷೆ ಎಂ.ಮಂಜಮ್ಮ, ಅಮೃತಾ ಹಿರೇಮಠ ಸೇರಿ ಅನೇಕರು ಶ್ರೀಶೈಲ ಯಾತ್ರಿಕರಿಗೆ ಮಜ್ಜಿಗೆ ನೀಡುತ್ತಿರುವುದು. 
ಜಿಲ್ಲೆ

ಶ್ರೀಶೈಲ ಯಾತ್ರಿಕರಿಗೆ ದಾಸೋಹ ವ್ಯವಸ್ಥೆ

Kopala - Desk - Eraveni

ಮಸ್ಕಿ: ಪ್ರತಿ ವರ್ಷದಂತೆ ಈ ಬಾರಿ ಸಹ ಯುಗಾದಿ ಹಬ್ಬದಂದು ಶ್ರೀಶೈಲ ಮಲ್ಲಿಕಾರ್ಜುನ ದೇವರ ಜಾತ್ರೆ ಹಿನ್ನೆಲೆಯಲ್ಲಿ ನಿತ್ಯ ಸಾವಿರಾರು ಭಕ್ತರು ದೂರದ ಊರುಗಳಿಂದ ಪಾದಯಾತ್ರೆ ಕೈಗೊಂಡಿದ್ದು, ಅವರಿಗಾಗಿ ಪಟ್ಟಣದ ವಿವಿಧೆಡೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ.

ಮುದ್ದು ಮಲ್ಲಯ್ಯ ದೇವಸ್ಥಾನದ ಹತ್ತಿರ ಮತ್ತು ತುಂಗಭದ್ರಾ ಕಾಲುವೆ ಬಳಿ, ಕಂಬಾಳಿಮಠದಲ್ಲಿ, ಬ್ಯಾಳೇರ ಓಣಿಯಲ್ಲಿ ದಾಸೋಹ ಸೇವೆ ಸಲ್ಲಿಸುತ್ತಿವೆ.

ಬೆಳಗಾವಿಯ ಚಿಕ್ಕೋಡಿ, ರಾಮದುರ್ಗ, ಮುಧೋಳ, ವಿಜಯಪುರ, ಬಾಗಲಕೋಟೆ ಸೇರಿ ಅನೇಕ ಊರುಗಳಿಂದ ಸಾವಿರಾರು ಭಕ್ತರ ದಂಡು ಮಸ್ಕಿ ಮಾರ್ಗವಾಗಿ ಶ್ರೀಶೈಲ ಕ್ಷೇತ್ರಕ್ಕೆ ತೆರಳುತ್ತಿದ್ದು, ಅವರಿಗಾಗಿ ಪಟ್ಟಣದಲ್ಲಿ ಶಿಗ್ಮಾ ಸ್ವಯಂ ಸೇವಾ ಸಂಸ್ಥೆ ಸೇರಿ ವಿವಿಧ ಸಂಘ-ಸಂಸ್ಥೆಗಳು, ವಿವಿಧ ಸಮಾಜದವರು, ಉದ್ಯಮಿಗಳು, ವರ್ತಕರು, ಯುವಕರು ಪ್ರಸಾದ, ಉಪಾರ, ಹಣ್ಣು-ಹಂಪಲು ವಿತರಣೆ, ಮಜ್ಜಿಗೆ, ಶರಬತ್, ತಂಪು ಪಾನೀಯ, ಶುದ್ಧ ನೀರು ಸೇರಿ ವಿಶ್ರಾಂತಿ ವ್ಯವಸ್ಥೆ ಮಾಡುತ್ತಿದ್ದಾರೆ.