ಜಿಲ್ಲೆ

ಶ್ರೀರಾಮುಲು ಬಗ್ಗೆ ಆರೋಪ ಸಲ್ಲ

ರುದ್ರಪ್ಪ ವಾಲಿ

ಹಗರಿಬೊಮ್ಮನಹಳ್ಳಿ: ಶ್ರೀರಾಮುಲು ಬಗ್ಗೆ ಶಾಸಕ ಜನಾರ್ದನ ರೆಡ್ಡಿ ಆರೋಪಮಾಡಿರುವುದನ್ನು ಸಮುದಾಯ ಮತ್ತು ಶ್ರೀರಾಮುಲು ಅಭಿಮಾನಿ ಬಳಗ ಸಹಿಸುವುದಿಲ್ಲ, ಕೂಡಲೇ ಜನಾರ್ದನ ರೆಡ್ಡಿ ಕ್ಷಮೆಯಾಚಿಸಬೇಕು ಎಂದು ವಾಲ್ಮೀಕಿ ಸಮುದಾಯದ ಮುಖಂಡರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಿಜೆಪಿ ಎಸ್.ಟಿ.ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಟಿ.ಮಹೇಂದ್ರ ಮಾತನಾಡಿ, ರಾಜ್ಯದ ಅನೇಕ ಸಚಿವ ಸ್ಥಾನಗಳು ಮತ್ತು ಲೋಕಸಭಾ ಸದಸ್ಯರಾಗಿಯೂ ಸೇವೆಗೈದಿರುವ ಶ್ರೀರಾಮುಲು ಅವರು ರಾಜ್ಯದಲ್ಲಿ ಪರಿಶಿಷ್ಟ ಸಮುದಾಯದ ದೊಡ್ಡ ಶಕ್ತಿಯಾಗಿದ್ದಾರೆ.

ಅಂತಹ ವ್ಯಕ್ತಿಯ ಬಗ್ಗೆ ಶಾಸಕ ಜನಾರ್ಧನ ರೆಡ್ಡಿ ಆರೋಪ ಮಾಡುವುದು ಸರಿಯಲ್ಲ. ಜನಾರ್ದನ ರೆಡ್ಡಿ ಕೂಡಲೆ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಉಲವತ್ತಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ್ ಮಾತನಾಡಿ, ದೊಡ್ಡ ಸಮುದಾಯ ಇರುವ ಶ್ರೀರಾಮುಲು ರೆಡ್ಡಿಯನ್ನು ಎಂದಿಗೂ ಬೇರೆ ಜನಾಂಗದವರೆಂದು ಪರಿಗಣಿಸಿಲ್ಲ.

ಈಗ ಏಕಾಏಕಿ ಆರೋಪ ಸರಿಯಲ್ಲಿ ಎಂದರು. ಪುರಸಭೆ ಸದಸ್ಯ ಜೋಗಿ ಹನುಮಂತು, ಪ್ರಮುಖರಾದ ಮೋಟಮ್ಮನವರ ಹನುಮಂತಪ್ಪ, ಎನ್.ಡಿ.ಕೆರೆ ಉಮೇಶ, ಸೀಗೇನಹಳ್ಳಿ ಬಾಳಪ್ಪ, ದೇವರಮನಿ ನೀಲಪ್ಪ, ಉದಯಕುಮಾರ, ರಾಜಪ್ಪ, ಚಿಂತ್ರಪಳ್ಳಿ ನಾಗರಾಜ, ಬಸವರಾಜ, ಗುಂಡಾ ಕೃಷ್ಣಾ, ಕೊಳ್ಳಿ ಪ್ರಕಾಶ, ಶಿವಕುಮಾರ ಇತರರಿದ್ದರು.