ಜಿಲ್ಲೆ

ಶ್ರೀರಾಮ ಸೇನೆಯಿಂದ ಬೃಹತ್ ರ‌್ಯಾಲಿ

ಮರಿದೇವ ಹೂಗಾರ

ಹುಬ್ಬಳ್ಳಿ: ನೇಹಾ ಹಿರೇಮಠ ವಾರ್ಷಿಕ ಶ್ರದ್ಧಾಂಜಲಿ ಮತ್ತು ನ್ಯಾಯಕ್ಕಾಗಿ, ಸ್ವರಕ್ಷಣೆಗಾಗಿ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ಮತ್ತು ಲವ್ ಜಿಹಾದ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಿಮಿತ್ತ ಇಲ್ಲಿಯ ಶ್ರೀ ಸಿದ್ಧಾರೂಢ ಮಠದಿಂದ ಶ್ರೀರಾಮಸೇನೆ ವತಿಯಿಂದ ಬುಧವಾರ ಬೃಹತ್ ಆಟೋರಿಕ್ಷಾ ರ‌್ಯಾಲಿ ಜರುಗಿತು.

ಸಿದ್ಧಾರೂಠ ಮಠದಿಂದ ರ‌್ಯಾಲಿ ಆರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೂರುಸಾವಿರ ಮಠದ ಆವರಣ ತಲುಪಿತು. ಈ ವೇಳೆ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಮಂಜುನಾಥ ಕಾಟಕರ್, ಲೋಕೇಶ ಗುಂಜಾಳ, ಅಣ್ಣಪ್ಪ ದಿವಟಗಿ, ಮಂಜು ಕಾಟಕರ್, ಬಸು ದುರ್ಗದ, ಬಸು ಗೌಡರ್, ಮಹೇಶ ಟೋಟಗಳಿ, ಪ್ರವೀಣ ಮಾಲದಕರ್, ಇತರರು ಇದ್ದರು.