ಪುತ್ತೂರು ಗ್ರಾಮಾಂತರ: ಪುತ್ತೂರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ನ.29 ಮತ್ತು 30ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಏರ್ಪಡಿಸಲಾಗಿರುವ ಮೂರನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ, ಹಿಂದವಿ ಸಾವ್ರಾಜ್ಯೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಪಡುಮಲೆ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಸಹ ಸಂಚಾಲಕ ರವಿಕುಮಾರ್ ರೈ ಕೇದಂಬಾಡಿ ಮಠ, ಪದಾಧಿಕಾರಿಗಳಾದ ರವಿ ಶೆಟ್ಟಿ ಕಾವು, ಗ್ರಾಮ ಸಮಿತಿ ಅಧ್ಯಕ್ಷ ಉದಯ ಕನ್ನಡ್ಕ, ಬಡಗನ್ನೂರು ಗ್ರಾ.ಪಂ. ಸದಸ್ಯ ಸಂತೋಷ್ ಆಳ್ವ ಗಿರಿಮನೆ, ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಸಮಿತಿ ಸದಸ್ಯರಾದ ಉದಯ ಕುಮಾರ್ ಪಡುಮಲೆ, ಜನಾರ್ದನ ಪೂಜಾರಿ ಪದಡ್ಕ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಂಗಾಧರ ರೈ ಮೇಗಿನಮನೆ, ಪುತ್ತಿಲ ಪರಿವಾರದ ರಾಮಕೃಷ್ಣ ಭಟ್ ಚಂದುಕೂಡ್ಲು, ರವಿ ಎನ್.ಪಡುಮಲೆ, ಸ್ಥಳೀಯರಾದ ಪುರಂದರ ರೈ ಸೇನೆರೆಮಜಲು, ಶ್ರೀಧರ್ ನಾಯ್ಕ ನೆರ್ಲಂಪಾಡಿ, ಶಿವಕುಮಾರ್ ಮೋಡಿಕೆ ಮತ್ತಿತರರಿದ್ದರು. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಪ್ರಾಸ್ತಾವಿಕ ಮಾತನಾಡಿದರು.