ಜಿಲ್ಲೆ

ಲೋಕಕಲ್ಯಾಣಾರ್ಥ ಶ್ರೀನಿವಾಸ ಕಲ್ಯಾಣೋತ್ಸವ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಯಾಲಕ್ಕಿ ಶೆಟ್ಟರ ಕಾಲನಿಯ ಪುರಂದರ ಮಂಟಪದಲ್ಲಿ ಲೋಕಕಲ್ಯಾಣಾರ್ಥ ಶ್ರೀನಿವಾಸ ಕಲ್ಯಾಣೋತ್ಸವ ಬುಧವಾರ ಜರುಗಿತು. ಅರ್ಚಕ ವಿಜಯ ವಿಠಲಾಚಾರ್ ನೇತೃತ್ವದಲ್ಲಿ ವಿಧಿವಿಧಾನಗಳೊಂದಿಗೆ ಕಲ್ಯಾಣೋತ್ಸವ ನೆರವೇರಿಸಿದರು.

ಇದಕ್ಕೂ ಮೊದಲು ಸೌಭಾಗ್ಯ ಮಂಡಳಿಯಿ0ದ ಗೋವಿಂದ ನಾಮಾವಳಿ, ಸೋಬಾನ ಪದಗಳನ್ನು ಪ್ರಸ್ತುತಪಡಿಸಲಾಯಿತು. ಸಿ. ನಾಗರಾಜ, ಪಂ. ಜಿ.ವಿ. ನವಲಗುಂದ, ರಮೇಶ ಕುಲಕರ್ಣಿ, ರಮೇಶ ಮಜುಂದಾ, ಅಡವಿರಾವ್ ದೇಸಾಯಿ, ಲಕ್ಷ್ಮಣ ನಾಡಿಗೇರ, ಆರ್.ಪಿ. ಪಾಟೀಲ, ರಜನಿ ಕುಲಕರ್ಣಿ, ಇತರರು ಪಾಲ್ಗೊಂಡಿದ್ದರು.