ಜಿಲ್ಲೆ

ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಶ್ರೀನಿಕೇತನ ಸಾಧನೆ

Gadag - Desk - Tippanna Avadoot

ಶಿರಸಿ: ವಿಜಯಪುರದ ವಿದ್ಯಾಭಾರತಿ ಪ್ರೌಢಶಾಲೆಯಲ್ಲಿ ಶ್ರೀ ಭಗವದ್ಗೀತಾ ಅಭಿಯಾನದ ಪ್ರಯುಕ್ತ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಇಸಳೂರಿನ ಶ್ರೀನಿಕೇತನ ಶಾಲೆಯ ವಿದ್ಯಾರ್ಥಿನಿಯರು ಉತ್ತಮ ಸಾಧನೆ ತೋರಿದ್ದಾರೆ.

10ನೇ ತರಗತಿಯ ಅಪೂರ್ವಾ ಭಟ್ ಭಗವದ್ಗೀತಾ ಕಂಠ ಪಾಠದಲ್ಲಿ ದ್ವಿತೀಯ ಬಹುಮಾನ, ಸ್ಪೂರ್ತಿ ಹೆಗಡೆ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಹಾಗೂ ಗ್ರೀಷ್ಮಾ ಹೆಗಡೆ ಹಾಗೂ ಚಂದನಾ ಹೆಗಡೆ ತಂಡವು ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ವಿದ್ಯಾರ್ಥಿನಿಯರ ಈ ಸಾಧನೆಯನ್ನು ಮೆಚ್ಚಿ ಶಾಲೆಯ ಪ್ರಾಂಶುಪಾಲರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.