ಪೆರಡಾಲ ಕ್ಷೇತ್ರಕ್ಕೆ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ ನೀಡಿದರು. ವೆಂಕಟ್ರಮಣ ಭಟ್ ಚಂಬಲ್ತಿಮಾರು, ಶಿವರಾಮ ಭಟ್, ಪ್ರಮುಖರಾದ ಜಗನ್ನಾಥ ರೈ ಇತರರಿದ್ದರು.
- ಪೂರ್ಣಕುಂಭ ಸ್ವಾಗತ
- ಭಕ್ತರಿಗೆ ಮಂತ್ರಾಕ್ಷತೆ
ವಿಜಯವಾಣಿ ಸುದ್ದಿಜಾಲ ಬದಿಯಡ್ಕ
ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರಕ್ಕೆ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ ನೀಡಿದರು.
ಪೂರ್ಣಕುಂಭ ಸ್ವಾಗತ
ಆಡಳಿತ ಮಂಡಳಿ ಸದಸ್ಯರು, ಸಮಿತಿಗಳ ಸದಸ್ಯರು, ಭಕ್ತರು ಪೂರ್ಣಕುಂಭ ಸ್ವಾಗತ ನೀಡಿ ಶ್ರೀಗಳನ್ನು ಬರಮಾಡಿಕೊಂಡರು. ರಾತ್ರಿ ದೇವರಿಗೆ ಪೂಜೆ ಸಲ್ಲಿಸಿ ಬಳಿಕ ಕ್ಷೇತ್ರದ ಕುರಿತು ಮಾಹಿತಿ ಪಡೆದುಕೊಂಡರು. ಭಕ್ತರಿಗೆ ಮಂತ್ರಾಕ್ಷತೆ ನೀಡಿದರು.
ಗಣ್ಯರ ಉಪಸ್ಥಿತಿ
ಕ್ಷೇತ್ರ ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಪ್ರಧಾನ ಅರ್ಚಕ ಶಿವರಾಮ ಭಟ್, ಪ್ರಮುಖರಾದ ಜಗನ್ನಾಥ ರೈ, ನಿರಂಜನ ರೈ ಪೆರಡಾಲ, ಸೂರ್ಯನಾರಾಯಣ ಬಿ, ಗೋಪಾಲಕೃಷ್ಣ ಪೈ, ಕೃಷ್ಣಮೂರ್ತಿ ಪುದುಕೋಳಿ, ಗಣೇಶ ಪ್ರಸಾದ್, ಡಾ.ಶ್ರೀಶ ಕುಮಾರ್, ಸತೀಶ್ ಕುಮಾರ್, ಜಯಶಂಕರ್ ಪಿ.ಎಸ್, ಪಿ.ಜಿ.ಚಂದ್ರಹಾಸ ರೈ, ವಿವಿಧ ಸಮಿತಿ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.