ಗೋಕರ್ಣ: ಇಲ್ಲಿನ ಆನುವಂಶೀಯ ಉಪಾಧಿವಂತ ಮಂಡಳದ ಮಹಾಸಂರಕ್ಷಕರಾಗಿ ಅನುಗ್ರಹಿಸಲು ಶೃಂಗೇರಿ ಶ್ರೀಶಾರದಾ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಭಾರತೀತೀರ್ಥ ಸ್ವಾಮೀಜಿ ಸಮ್ಮತಿಯಿತ್ತು ಅನುಗ್ರಹಿಸಿದ್ದಾರೆ.
ಈ ಸಂಬಂಧ ಶ್ರೀಮಠದಿಂದ ನೀಡಲಾದ ಅಧಿಕೃತ ಆದೇಶ ಪತ್ರವನ್ನು ಆಡಳಿತಾಧಿಕಾರಿ ವಿ.ಆರ್.ಗೌರೀಶಂಕರ ಇತ್ತೀಚೆಗೆ ಮಂಡಳದ ಅಧ್ಯಕ್ಷ ರಾಜಗೋಪಾಲ ಅಡಿ ಅವರಿಗೆ ನೀಡಿದರು.
ಈ ವೇಳೆ ಸದಸ್ಯರಾದ ಪ್ರಸನ್ನ ಜೋಗಭಟ್ಟ ಮತ್ತು ಅನಂತರಾಜ ಜೋಗಭಟ್ಟ ಇದ್ದರು.
ಮಂಡಳದ ವಿನಂತಿಗೆ ಉಭಯ ಶ್ರೀಗಳು ಸಮ್ಮತಿಸಿರುವ ಬಗ್ಗೆ ಸಂಸ್ಥೆಯ ಪ್ರಮುಖರಾದ ಹಿರಿಯ ಆಗಮ ವಿದ್ವಾಂಸ ವಿದ್ವಾನ್ ಗಣಪತಿ ಶಾಸ್ತ್ರಿ, ವೇದವಿದ್ವಾಂಸ ಕೃಷ್ಣ ಜೋಗಭಟ್ಟ, ವಿದ್ವಾನ್ ಗಜಾನನ ದೀಕ್ಷಿತ, ಮಹಾಬಲೇಶ್ವರ ಮಂದಿರದ ಪ್ರಧಾನ ಅರ್ಚಕ ವೇ.ಗುರುಮೂರ್ತಿ ಹಿರೇ, ಶಂಕರ ಗೋಪಿ, ಡಾ.ಮಹಾಬಲಮೂರ್ತಿ ಶಾಸ್ತ್ರಿ, ವೇ.ತ್ರಯಂಬಕ ಗುರ್ಲಿಂಗ, ದುಂಢಿರಾಜ ಶಾಸ್ತ್ರಿ, ವೆಂಕಟೇಶ ಧಾರೇಶ್ವರ ಮುಂತಾದವರು ಸಂತಸ ವ್ಯಕ್ತ ಪಡಿಸಿದ್ದಾರೆ.