ಹಿರೀಸಾವೆ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶ್ರೀನಾಥ ಬಾಬು ಶನಿವಾರ ಅವಿರೋಧವಾಗಿ ಆಯ್ಕೆಯಾದರು. ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಶ್ರೀನಾಥ ಬಾಬು ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಶ್ರೀನಾಥ ಬಾಬು ಅವಿರೋಧವಾಗಿ ಆಯ್ಕೆಯಾದರು.
ಸಹಕಾರ ಇಲಾಖೆಯ ಅಧಿಕಾರಿ ವಾಸಿಮ್, ಸಂಘದ ಮೇಲ್ವಿಚಾರಕ ಮಧು ಹಾಗೂ ಸಂಘದ ಇಒ ಎಚ್.ಎನ್.ಹರೀಶ್ ಚುನಾವಣಾ ಕರ್ತವ್ಯ ನಿರ್ವಹಿಸಿದರು. ಅವಿರೋಧವಾಗಿ ಆಯ್ಕೆಯಾದ ಶ್ರೀನಾಥ ಬಾಬು ಅವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು.
ಸಂಘದ ಉಪಾಧ್ಯಕ್ಷ ಮಂಜಪ್ಪ, ಮಾಜಿ ಅಧ್ಯಕ್ಷ ನಾಗೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್, ಪ್ರಮುಖರಾದ ರವಿಕುಮಾರ್, ಶ್ರೀಧರ್, ಮುರುಳೀಧರ್, ಎಚ್.ಕೆ.ವೆಂಕಟೇಶ್, ಬೋರೇಗೌಡ, ಸಂಘದ ನಿರ್ದೇಶಕರು ಇದ್ದರು.