ಕೋಟ: ಸಾಸ್ತಾನ ಕೆಳಬೆಟ್ಟು ಕಳಿಬೈಲ್ ಶ್ರೀ ತುಳಸಿ ಅಮ್ಮ ಶಿರಸಿ ಮಾರಿಕಾಂಬೆ ಪಂಜುರ್ಲಿ, ಸ್ವಾಮಿ ಕೊರಗಜ್ಜ ಸಪರಿವಾರ ದೈವಸ್ಥಾನದಲ್ಲಿ ಅ.3ರಿಂದ 13ರವರೆಗೆ ಶರನ್ನವರಾತ್ರಿ ಉತ್ಸವ ನಡೆಯಲಿದೆ. ಪ್ರತಿದಿನ ಸಂಜೆ 6ರಿಂದ ಭಜನೆ, ಮಹಾಪೂಜೆ, ನವರಾತ್ರಿ ಪೂಜೆ, ಅ.6ರಂದು ನಾಯಿರ್‌ಬೆಟ್ಟು ರಮೇಶ್ ಭಟ್ ನೇತೃತ್ವದಲ್ಲಿ ಸಾಮೂಹಿಕ ದುರ್ಗಾಪೂಜೆ, ಬೆಳಗ್ಗೆ 9ಗಂಟೆಗೆ ಪ್ರಸನ್ನ ಪೂಜೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಮಧ್ಯಾಹ್ನ 2ಗಂಟೆಗೆ ಪಂಜುರ್ಲಿ, ಶಿರಸಿ ಅಮ್ಮನವರ ದರ್ಶನ ಸೇವೆ, 3 ಗಂಟೆಗೆ ಸ್ವಾಮಿ ಕೊರಗಜ್ಜನ ದರ್ಶನ ಸೇವೆ, ಸಂಜೆ 6.30ಕ್ಕೆ ಭಜನಾ ಕಾರ್ಯಕ್ರಮ, ಪ್ರತಿದಿನ ರಾತ್ರಿ 8ಕ್ಕೆ ಮಹಾಮಂಗಳಾರತಿ, ನವರಾತ್ರಿ ಪೂಜೆ ನಡೆಯಲಿದೆ ಎಂದು ಮೊಕ್ತೇಸರ ಎಂ.ಸಿ.ಚಂದ್ರಶೇಖರ್, ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.