ಬೆಟಗೇರಿ ಗ್ರಾಮದಲ್ಲಿ ಏರ್ಪಡಿಸಿದ್ದ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮವನ್ನು ಧರ್ಮಸ್ಥಳ ಸಂಸ್ಥೆಯ ತಾಲೂಕಾ ಯೋಜನಾಧಿಕಾರಿ ಜಗದೀಶ ಉದ್ಘಾಟಿಸಿದರು. ನಿವೃತ್ತ ಶಿಕ್ಷಕ ಶಂಕರಪ್ಪ, ಮುಖ್ಯ ಶಿಕ್ಷಕ ಪರಶುರಾಮ ಸಾಲ್ಮನಿ, ವಲಯ ಮೇಲ್ವಿಚಾರಕ ಬಿ.ಲಿಂಗರಾಜ ಇತರರಿದ್ದರು. 
ಜಿಲ್ಲೆ

ಯುವಕರು ದೇಶದ ಸಂಪತ್ತು

ಅಳವಂಡಿ: ದೇಶದ ಅಭಿವೃದ್ಧಿ ಪ್ರಜೆಗಳ ಆರೋಗ್ಯದ ಮೇಲೆ ಅವಲಂಬಿಸಿದೆ ಎಂದು ನಿವೃತ್ತ ಶಿಕ್ಷಕ ಶಂಕರಪ್ಪ ಮಾದಿನೂರ ಹೇಳಿದರು.

ಯುವ ಜನಾಂಗದ ವಿದ್ಯಾಭ್ಯಾಸದತ್ತ ಹೆಚ್ಚಿನ ಗಮನ ಹರಿಸಲಿ

ಸಮೀಪದ ಬೆಟಗೇರಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಬಿ.ಸಿ. ಟ್ರಸ್ಟ್ ಹಮ್ಮಿಕೊಂಡಿದ್ದ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು. ಯುವಕರು ದೇಶದ ಸಂಪತ್ತು. ಯುವ ಜನಾಂಗದ ವಿದ್ಯಾಭ್ಯಾಸದತ್ತ ಹೆಚ್ಚಿನ ಗಮನ ಹರಿಸಬೇಕು. ದುಶ್ಚಟಗಳಿಂದ ದೂರವಿರವಿದ್ದು, ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಯುವಕರು ಅತಿಯಾದ ಮೊಬೈಲ್ ದಾಸರಾಗಿ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಅವಶ್ಯತೆಗೆ ತಕ್ಕಂತೆ ಮೊಬೈಲ್ ಉಪಯೋಗಿಸಬೇಕು. ಪರಿಶ್ರಮದಿಂದ ಬದುಕು ಕಟ್ಟಿಕೊಂಡಾಗ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
ಧರ್ಮಸ್ಥಳ ಸಂಸ್ಥೆಯ ತಾಲೂಕಾ ಯೋಜನಾಧಿಕಾರಿ ಜಗದೀಶ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ಪರಶುರಾಮ ಸಾಲ್ಮನಿ, ವಲಯ ಮೇಲ್ವಿಚಾರಕ ಬಿ.ಲಿಂಗರಾಜ, ಸೇವಾ ಪ್ರತಿನಿಧಿಗಳಾದ ಕವಿತಾ, ಸವಿತಾ, ರಾಜೇಶ್ವರಿ, ಲತಾ ಇನ್ನಿತರರಿದ್ದರು.