ಜಿಲ್ಲೆ

ಕೃಷ್ಣನ ಸಂದೇಶ ಪಾಲನೆಯಾಗಲಿ- ಅರ್ಪಿತಾ ಪ್ರಶಾಂತ್ ಶೆಟ್ಟಿ ಸಲಹೆ - ಪುತ್ತೂರಿನಲ್ಲಿ ಶ್ರೀಕೃಷ್ಣ ಲೋಕ

Mangaluru - Nishantha Narayana


ಪುತ್ತೂರು: ಕೃಷ್ಣವೇಷ ಹಾಕುವ ಜತೆಗೆ ಕೃಷ್ಣನ ತತ್ವ, ಸಂದೇಶಗಳನ್ನು ಮಕ್ಕಳು ಪಾಲಿಸಬೇಕು. ಬಿಟ್ಟುಕೊಟ್ಟುವುದರಲ್ಲಿ ಇರುವ ಸುಖ ಕಟ್ಟಿಕೊಡುವುದರಲ್ಲಿಲ್ಲ. ಸಂಪತ್ತಿನ ಹಿಂದೆ ಹೋಗಬಾರದು. ಮುಗ್ಧ ಭಕ್ತಿ ಹಾಗೂ ಸಂಪೂರ್ಣ ಶರಣಾಗತಿಗೆ ಭಗವಂತ ಒಲಿಯುತ್ತಾನೆ ಎಂದು ಉಡುಪಿ ಮಣಿಪಾಲ ಸಮೂಹ ಶಿಕ್ಷಣ ಸಂಸ್ಥೆಗಳ ಸಹ ಪ್ರಾಧ್ಯಾಪಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ ಹೇಳಿದರು.


ನಗರದ ಪರ್ಲಡ್ಕ ಶಿವಪೇಟೆಯಲ್ಲಿರುವ ವಿವೇಕಾನಂದ ಶಿಶುಮಂದಿರದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಆಶ್ರಯದಲ್ಲಿ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ದೇವಾಲಯದ ಮುಂಭಾಗದಲ್ಲಿ ನಡೆದ ೨೬ನೇ ವರ್ಷದ ‘ಶ್ರೀಕೃಷ್ಣ ಲೋಕ’ ಕಾರ್ಯಕ್ರಮದಲ್ಲಿ ಮಾಡಿದರು.


ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಽಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚಾಲ್ ಮಾತನಾಡಿ, ಬದುಕಿಗೆ ದಾರಿ ಹೇಳಿಕೊಡುವ ತಂದೆ-ತಾಯಿ ಮತ್ತು ಗುರುವಿಗೆ ಮೊದಲ ವಂದನೆ ಸಲ್ಲಬೇಕು. ತಾಯಿ ಸರಿಯಾಗಿದ್ದರೆ ಮಕ್ಕಳು ಪರಿಪೂರ್ಣ ಬೆಳವಣಿಗೆ ಕಾಣುತ್ತಾರೆ. ಮಕ್ಕಳಿಗೆ ನಮ್ಮ ಸನಾತನ ಸಂಸ್ಕೃತಿಯನ್ನು ತಿಳಿಸಿಕೊಡಬೇಕು ಎಂದು ಹೇಳಿದರು.


ದೇವಸ್ಥಾನದ ಆಡಳಿತಾಽಕಾರಿ ನವೀನ್‌ಕುಮಾರ್ ಭಂಡಾರಿ ಉದ್ಘಾಟಿಸಿದರು. ಬೆಳ್ಳಾರೆಯ ಉದ್ಯಮಿ ಬಿ. ಮಿಥುನ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಶ್ರೀಕೃಷ್ಣ ಲೋಕ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಲ್ಲ ಕೃಷ್ಣ, ರಾಧೆ ವೇಷಧಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಗೌರವಾಧ್ಯಕ್ಷೆ ರಾಜೀ ಬಲರಾಮ್, ಅಧ್ಯಕ್ಷ ಸಂತೋಷ್ ಕುಮಾರ್ ರೈ, ಉಪಾಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಮೇಘನಾ ಪಾಣಾಜೆ, ಕೋಶಾಽಕಾರಿ ಕಿಶನ್ ಕುಮಾರ್, ವಿವೇಕಾನಂದ ಶಿಶು ಮಂದಿರದ ಅಧ್ಯಕ್ಷ ರಾಜಗೋಪಾಲ್ ಭಟ್, ಸಂಚಾಲಕ ಅಕ್ಷಯ ಕುಮಾರ್ ಉಪಸ್ಥಿತರಿದ್ದರು. ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ದಾಮೋದರ ಪಾಟಾಳಿ, ಪ್ರಾಧ್ಯಾಪಕಿ ಡಾ. ವಿಜಯ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.