ಜಿಲ್ಲೆ

ಜೆಎಸ್​ಎಸ್ ಶಾಲೆಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಸಂಭ್ರಮ

ಮರಿದೇವ ಹೂಗಾರ

ಹುಬ್ಬಳ್ಳಿ: ನಗರದ ಜೆಎಸ್​ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಗುರುವಾರ ವಿಶೇಷವಾಗಿ ಆಚರಿಸಲಾಯಿತು.

ಮುಖ್ಯೋಪಾಧ್ಯಾಯಿನಿ ರಜನಿ ಪಾಟೀಲ ಅವರು, ಶ್ರೀಕೃಷ್ಣನ ಜನನ, ಕೃಷ್ಣನಿಗೆ ಕೊಳಲು ಬಂದಿದ್ದು, ನವಿಲುಗರಿ, ಬೃಂದಾವನ ರಾಸಲೀಲೆ ಹಾಗೂ ಕೃಷ್ಣನ ಮಡಿಕೆ ಒಡೆಯುವ ಪ್ರಸಂಗಗಳನ್ನು ವಿವರಿಸಿದರು. 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ವಿವಿಧ ನೃತ್ಯಗಳನ್ನು ಪ್ರದರ್ಶಿಸಿದರು.