ಜಿಲ್ಲೆ

ಶ್ರೀಗುರು ರಾಯರ ಅದ್ದೂರಿ ಬೆಳ್ಳಿ ರಥೋತ್ಸವ

ಹೊನ್ನಾಳಿ: ಪಟ್ಟಣದ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀಗುರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ಹಿನ್ನೆಲೆ ವಿವಿಧ ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಬೆಳ್ಳಿ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ಕಳೆದ ಮೂರು ದಿನಗಳಿಂದ ಗುರುರಾಯರ ಪೂರ್ವಾರಾಧನೆ, ಮಧ್ಯಾರಾಧನೆ,ಶನಿವಾರ ಉತ್ತರಾರಾಧನೆ ಅಂಗವಾಗಿ ರಾಯರ ಬೆಳ್ಳಿ ರಥೋತ್ಸವ ನಡೆಯಿತು. ಭಾನುವಾರ ಪವನಹೋಮ ಮತ್ತು ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಮಠದ ಕಾರ್ಯದರ್ಶಿ ವಾಧಿರಾಜ್ ಕಮರೂರು ತಿಳಿಸಿದ್ದಾರೆ.

ಆರಾಧನಾ ಕಾಲದಲ್ಲಿ ಪಂಡಿತರಿಂದ ಉಪನ್ಯಾಸ, ಸರ್ವಮೂಲ ಪಾರಾಯಣಾಧಿಗಳೊಂದಿಗೆ ಜ್ಞಾನಾರಾಧನೆ, ಸಂಗೀತ ಕಲಾವಿದರ ಗಾನಾರಧನೆ, ಜ್ಞಾನಿಗಳು, ಸಮಾಜದ ವಿವಿಧ ಸ್ತರದ ಗಣ್ಯರಿಗೆ ಸನ್ಮಾನ ನಡೆಯಿತು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಶ್ರೀಮಠಕ್ಕೆ ಭೇಟಿ ನೀಡಿ, ರಾಯರ ದರ್ಶನ ಪಡೆದರು. ನಂತರ ಶ್ರೀಮಠದ ಆಡಳಿತ ಮಂಡಳಿಯವರು ಶಾಸಕರಿಗೆ ಸನ್ಮಾನ ಮಾಡಿದರು.

ರಾಘವೇಂದ್ರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎಚ್.ಎಂ.ಶ್ರೀನಿವಾಸ್‌ಮೂರ್ತಿ,ಉಪಾಧ್ಯಕ್ಷ ಕೆ.ಆರ್.ಶ್ರೀನಿವಾಸ್, ಕಾರ್ಯದರ್ಶಿ ವಾಧಿರಾಜ್ ಕಮರೂರು, ನಿರ್ದೇಶಕರಾದ ಎನ್.ಜಯರಾವ್, ಸಿ.ಸತ್ಯನಾರಾಯಣ್‌ರಾವ್, ಎಚ್.ಎನ್.ಗುರುದತ್ತ, ಎಂ.ವಿ.ಬದರಿನಾರಾಯಣ್, ಬಿ.ರಾಘವೇಂದ್ರಚಾರ್ ಹಾಗೂ ಎಸ್.ಎನ್.ಪ್ರಕಾಶ್ ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.