ಚಿಕ್ಕಮಗಳೂರು: ನಾಡಹಬ್ಬ ನವರಾತ್ರಿ ಪ್ರಯುಕ್ತ ನಗರದ ವಿಜಯಪುರದಲ್ಲಿ ಪ್ರತಿಷ್ಟಾಪಿಸಲಾಗಿದ್ದ ಶ್ರೀದುರ್ಗಾದೇವಿ ಮೂರ್ತಿಯನ್ನು ಶನಿವಾರ ಪ್ರಮುಖ ರಾಜಾಬೀದಿಗಳಲ್ಲಿ ಮೆರವಣಿಗೆ ನಡೆಸಿ ರಾತ್ರಿ ನಗರದ ಹೊರವಲಯದ ಇಂದಾವರ ಕೆರೆಯಲ್ಲಿ ವಿಸರ್ಜಿಸಲಾಯಿತು.
ನವರಾತ್ರಿ ಅಂತಿಮದಿನ ವಿಜಯದಶಮಿಯಂದು ಸಂಜೆ ೬ ಗಂಟೆಗೆ ಬೃಹತ್ ದೀಪಾಲಂಕಾರದ ಮಂಟಪದಲ್ಲಿ ದೇವಿಯನ್ನು ಕುಳ್ಳಿರಿಸಿ ವಾದ್ಯಗಳೊಂದಿಗೆ ರಾಜಾಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಶ್ರೀ ದುರ್ಗಾದೇವಿ ಮೂರ್ತಿ ಮನೆಗಳ ಸಮೀಪ ಧಾವಿಸುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಕುಟುಂಬ ಸಮೇತ ಪೂಜೆ ಸಲ್ಲಿಸಿದರು. ಅಲ್ಲಲ್ಲಿ ಮುಖ್ಯಬೀದಿಗಳಲ್ಲಿ ಯುವಕರ ತಂಡವು ವಿವಿಧ ಬಗೆಯ ಸುಗಂಧ ಭರಿತ ಹೂವಿನ ಹಾರಗಳನ್ನು ದೇವಿಗೆ ಅರ್ಪಿಸಿ ಭಕ್ತಿ ಪರಾವಶರಾದರು.
ದಾರಿಯುದ್ಧಕ್ಕೂ ಯುವಕ, ಯುವತಿಯರು ಡಬ್ಸ್ ಶಬ್ದಕ್ಕೆ ಕುಣಿದು ಕುಪ್ಪಳಿಸಿದರು. ಅಲ್ಲಲ್ಲಿ ಯುವಕರ ತಂಡವು ಮೆರವಣಿಗೆ ಸಾಗಿದ ಭಕ್ತಾಧಿಗಳಿಗೆ ಲಘು ಉಪಹಾರ ವ್ಯವಸ್ಥೆ ಕಲ್ಪಿಸಿದ್ದರು. ಶ್ರೀ ದುರ್ಗಾದೇವಿ ಮೆರವಣಿಗೆ ರಾತ್ರಿ ೧೧.೪೫ಕ್ಕೆ ಒಕ್ಕಲಿಗರ ಭವನದ ಸಮೀಪ ಆಗಮಿಸಿದ ವೇಳೆ ಮಹಿಷಾಸುರ ದಹನ ನಡೆಯಿತು. ನೆರೆದಿದ್ದ ನೂರಾರು ಮಂದಿ ಜೈ ಶ್ರೀ ದುರ್ಗಾಮಾತೆ ಎಂಬ ಘೋಷಣೆ ಕೂಗಿದರು.
ಬಳಿಕ ಇಂದಾವರ ಕೆರೆಯಲ್ಲಿ ಮೂರ್ತಿಯ ವಿಸರ್ಜನಾ ಮಹೋತ್ಸವ ಸಂಪನ್ನಗೊAಡಿತು. ಈ ವೇಳೆ ದುರ್ಗಾ ಸೇವಾ ಸಮಿತಿ ನಂದಿ ಟ್ರಸ್ಟ್ ಪದಾಧಿಕಾರಿಗಳು ಹಾಜರಿದ್ದರು.