ಯಲಬುರ್ಗಾ ಬಸವಲಿಂಗೇಶ್ವರ ಶ್ರೀಧರಮುರಡಿ ಹಿರೇಮಠದಲ್ಲಿ ಹಮ್ಮಿಕೊಂಡ ಪುರಾಣ ಪ್ರವಚನ ಮಹಾ ಮಂಗಲೋತ್ಸವ ಹಿನ್ನೆಲೆ ಮೆರವಣಿಗೆ ಜರುಗಿತು. ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ಈಶಪ್ಪ ಸ್ಟ್ಯಾಂಪಿನ್, ಬಸಲಿಂಗಪ್ಪ ಕೊತ್ತ, ಬಸವಲಿಂಗಪ್ಪ ಸ್ಟ್ಯಾಂಪಿನ್, ಅಡಿವೆಯ್ಯ ಕಲ್ಯಾಣಮಠ, ಹೇಮಣ್ಣ ಖಾನಾವಳಿ, ಬಸಲಿಂಗಪ್ಪ ಕೊತ್ತ, ಎಸ್.ಕೆ.ದಾನಕೈ, ಷಣ್ಮುಖಪ್ಪ ರಾಂಪೂರ, ಶಿವು ಸಾದರ, ಮಲ್ಲಪ್ಪ ಬನ್ನಿಕೊಪ್ಪ, ಮಲ್ಲಪ್ಪ ಭೂತೆ ಇತರರಿದ್ದರು. 
ಜಿಲ್ಲೆ

ಶ್ರೀಧರಮುರಡಿ ಹಿರೇಮಠದ ಪುರಾಣ ಮಂಗಲೋತ್ಸವ

Kopala - Desk - Eraveni

ಯಲಬುರ್ಗಾ: ಪಟ್ಟಣದ ಬಸವಲಿಂಗೇಶ್ವರ ಶ್ರೀಧರಮುರಡಿ ಹಿರೇಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜನೆಯ ಪುರಾಣ ಪ್ರವಚನ ಮಹಾ ಮಂಗಲೋತ್ಸವ ಸೋಮವಾರ ಅದ್ದೂರಿಯಿಂದ ಜರುಗಿತು.

ಬೆಳಗ್ಗೆ ಬಸವಲಿಂಗೇಶ್ವರ ಕತೃ ಗದ್ದುಗೆಗೆ ವಿಶೇಷ ರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿ ಧಾರ್ಮಿಕ ಪೂಜಾ ವಿಧಿವಿಧಾನಗಳು ನಡೆದವು. ಜಿಗೇರಿ ಹಿರೇಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ, ಬೇನಾಳದ ಸದಾಶಿವಮಹಾಂತ ಸ್ವಾಮೀಜಿ ಹಾಗೂ ಶ್ರೀಧರಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿಗಳ ದಿವ್ಯ ಸಾನಿಧ್ಯ ವಹಿಸಿದ್ದರು. ಬೀದಿಗಳಲ್ಲಿ ಮೆರವಣಿಗೆ ನಡೆಯಿತು.

ಜೀಗೇರಿ-ವೆಂಕಟಾಪೂರದ ಗುರುಸಿದ್ದೇಶ್ವರ ಸ್ವಾಮೀಜಿ, ಮಸೂತಿ ಜಗದೇಶ್ವರ ಹಿರೇಮಠದ ಪ್ರಭುಕುಮಾರ ಸ್ವಾಮೀಜಿ, ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ಕುಕನೂರಿನ ಅನ್ನದಾನೇಶ್ವರ ಶಾಖಾಮಠದ ಮಹಾದೇವ ಸ್ವಾಮೀಜಿ, ಇಟಗಿ-ಚಿಕ್ಕಮ್ಯಾಗೇರಿಯ ಗುರುಶಾಂತವೀರ ಸ್ವಾಮೀಜಿ, ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ಈಶಪ್ಪ ಸ್ಟ್ಯಾಂಪಿನ್, ಬಸಲಿಂಗಪ್ಪ ಕೊತ್ತ, ಬಸವಲಿಂಗಪ್ಪ ಸ್ಟ್ಯಾಂಪಿನ್, ಅಡಿವೆಯ್ಯ ಕಲ್ಯಾಣಮಠ, ಹೇಮಣ್ಣ ಖಾನಾವಳಿ, ಬಸಲಿಂಗಪ್ಪ ಕೊತ್ತ, ಎಸ್.ಕೆ.ದಾನಕೈ, ಷಣ್ಮುಖಪ್ಪ ರಾಂಪೂರ, ಶಿವು ಸಾದರ, ಮಲ್ಲಪ್ಪ ಬನ್ನಿಕೊಪ್ಪ, ಮಲ್ಲಪ್ಪ ಭೂತೆ ಇತರರಿದ್ದರು.