ಸೋಮವಾರಪೇಟೆ: ಇಲ್ಲಿನ ಶ್ರೀ ನಾರಾಯಣಗುರು ಸೇವಾ ಸಮಿತಿ ಆಶ್ರಯದಲ್ಲಿ ಮೇ 10ರಂದು ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟವನ್ನು ಆಯೋಜಿಸಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಇಂದಿರಾ ಮೋಣಪ್ಪ ತಿಳಿಸಿದ್ದಾರೆ.
ಪಟ್ಟಣದ ಚನ್ನಬಸಪ್ಪ ಸಭಾಂಗಣದಲ್ಲಿ ಅಂದು ಸಂಜೆ 6 ಗಂಟೆಗೆ ಪ್ರದರ್ಶನ ಆರಂಭವಾಗಲಿದ್ದು, ದೇಶ, ವಿದೇಶಗಳಲ್ಲಿ ಪ್ರದರ್ಶನ ಮಾಡಿ ಜನಮನ್ನಣೆಗಳಿಸಿರುವ ತೆಂಕು ತಿಟ್ಟಿನ ಪ್ರಸಿದ್ಧ ಶ್ರೀ ಆದಿ ಧೂಮಾವತಿ ದೇಯಿ ಬೈದೆತಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಮೇಳದವರು ಶ್ರೀದೇವಿ ಮಹಾತ್ಮೆ ಪುಣ್ಯ ಕಥಾ ಭಾಗವನ್ನು ಯಕ್ಷಗಾನ ಬಯಲಾಟದಲ್ಲಿ ಆಡಿ ತೋರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸಮಾಜ ಸೇವಕರಾದ ಕಿರಗಂದೂರಿನ ಎ.ಎನ್. ಪದ್ಮನಾಭ ಅವರ ಪ್ರಾಯೋಜಕರಾಗಿದ್ದು, ಯಕ್ಷಗಾನ ಪ್ರದರ್ಶನ ಉಚಿತವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.