ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಸುೇತ್ರ ಕರವಿನಾಳ ಗ್ರಾಮದಲ್ಲಿ ಗ್ರಾಮದೇವತೆ ಶ್ರೀದೇವಿ ಜಾತ್ರೆ ಶುಕ್ರವಾರ ಸಂಭ್ರಮದಿಂದ ನಡೆಯಿತು. ಬೆಳಗ್ಗೆ ಕುಂಭ ಮೆರವಣಿಗೆಯೊಂದಿಗೆ ಶ್ರೀದೇವಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ರಥೋತ್ಸವ ಜರುಗಿತು.
ಗ್ರಾಮದ ಶ್ರೀದೇವಿಯ ದೇವಸ್ಥಾನದಿಂದ ಗಂಗಾಸ್ಥಳಕ್ಕೆ ತೆರಳಿ ನಂತರ ಪ್ರಮುಖ ಬೀದಿಯಲ್ಲಿ ಡೊಳ್ಳಿನ ವಾಲಗ, ಕುಂಭ ಮೆರವಣಿಗೆ ಮೂಲ ದೇವಸ್ಥಾನಕ್ಕೆ ಬರಲಾಯಿತು. ಪ್ರಧಾನ ಅರ್ಚಕರಾದ ಈರಣ್ಣ ವಿಶ್ವಕರ್ಮ, ಮಾನಪ್ಪ ವಿಶ್ವಕರ್ಮ, ವಾಸುದೇವ ವಿಶ್ವಕರ್ಮ ಇದ್ದರು.
ಸಾವಿರಾರು ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಯಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ಪಾಲ್ಗೊಂಡಿದ್ದರು.